ಉಡುಪಿ:ರಾಜ್ಯ ಪ್ರವಾಸೋದ್ಯಮದ ಫೇಮಸ್ ಬೀಚ್ ಲೈಟ್ ಹೌಸ್. ಆದ್ರೆ ಲೈಟ್ ಹೌಸ್ಗೆ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡ್ಕೊಂಡು ಹೋಗಬೇಕು. ಆಯತಪ್ಪಿ ಬಿದ್ರೆ ಅಪಾಯ ಗ್ಯಾರಂಟಿ.. ಇದು ಕಾಪು ಬೀಚ್ ಲೈಟ್ ಹೌಸ್ನ ಅವ್ಯವಸ್ಥೆ.
ಕರಾವಳಿಯ ಬೀಚ್ ಅಂದ್ರೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ತುಂಬಾ ಫೇಮಸ್. ಉಡುಪಿ ಜಿಲ್ಲೆಯ ಕಾಪು ಬೀಚ್ನಲ್ಲಿರುವ ಲೈಟ್ ಹೌಸ್ಗೆ ಶತಮಾನಗಳ ಇತಿಹಾಸವಿದೆ. ಈ ಬೀಚ್ ಲೈಟ್ ಹೌಸ್ಗೆ ದಿನಂಪ್ರತಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಬೀಚ್ ನೀರಿನಲ್ಲಿ ಆಟವಾಡುತ್ತ ಲೈಟ್ ಹೌಸ್ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳೋದು ಮಾಮೂಲಿ. ಆದ್ರೆ ಲೈಟ್ ಹೌಸ್ಗೆ ಹೋಗೋ ದಾರಿ ಸಂಪೂರ್ಣವಾಗಿ ಹದಗೆಟ್ಟಿದೆ. ಆರಂಭದಲ್ಲಿ ಸರ್ಕಸ್ ಮಾಡ್ತಾ ಮೇಲೆ ಹತ್ತಿದರೆ ಲೈಟ್ ಹೌಸ್ಗೆ ಹೋಗಬಹುದು. ಲೈಟ್ ಹೌಸ್ಗೆ ಹೋಗೋ ಆರಂಭದಲ್ಲಿ ನಿರ್ಮಿಸಿದ್ದ ಮೆಟ್ಟಿಲುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಕೊಚ್ಚಿ ಹೋದ ಕಲ್ಲಿನಲ್ಲೇ ಪ್ರವಾಸಿಗರು ತೆರಳೋ ದೃಶ್ಯ ಅಪಾಯಕ್ಕೆ ಆಹ್ವಾನ ನೀಡುವಂತಿದೆ.