ಉಡುಪಿ:ಕೃಷ್ಣ ಮಠ ವಿಶೇಷ ಸಂಪ್ರದಾಯ, ಆಚರಣೆಗಳಿಗೆ ಹೆಸರುವಾಸಿ. ಅದರಲ್ಲೂ ಅಶ್ವಯುಜ ಮಾಸದ ಯೋಗ ನಿದ್ರೆಯಲ್ಲಿ ಇರುವ ಮಾಧವನನ್ನು ಎಚ್ಚರಿಸುವ, ಪಶ್ಚಿಮ ಜಾಗರಪೂಜೆ ಕಾಣ್ತುಂಬಿಕೊಳ್ಳುವುದೇ ಕಣ್ಣಿಗೆ ಹಬ್ಬ. ಹಣತೆಗಳ ಬೆಳಕಿನಿಂದ ಕೃಷ್ಣ ಸಾನಿಧ್ಯ ಕಂಗೊಳಿಸಿದ್ರೆ, ವಾದ್ಯಘೋಷಗಳು ಭಕ್ತರ ಮನಸ್ಸಿಗೆ ಮುದ ನೀಡುತ್ತಿವೆ.
ಪರ್ಯಾಯ ಅದಮಾರು ಮಠಾಧೀಶ ಈಶ ಪ್ರಿಯ ಶ್ರೀಗಳಿಂದ ಕೂರ್ಮಾರತಿ. ಯೋಗ ನಿದ್ರೆಯಲ್ಲಿರುವ ಮಾಧವನನ್ನು ಎಚ್ಚರಿಸುವ ವಿಶೇಷ ಪೂಜೆ. ಆಶ್ವಯುಜ ಶುದ್ಧ ಏಕಾದಶಿಯಿಂದ ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ತನಕ ದೇವರನ್ನು ಯೋಗನಿದ್ರೆಯಿಂದ ಎಬ್ಬಿಸುವ ಸಂಭ್ರಮದ ಪಶ್ಚಿಮ ಜಾಗರಪೂಜೆ. ಉಡುಪಿ ಕೃಷ್ಣನಿಗೆ 16 ಬಗೆಯ ಪೂಜೆ ಮಾಡುತ್ತಾರೆ. ಆದರೆ ಎಲ್ಲಾ ಪೂಜೆಗಳಿಗೂ ಕಳಶವಿಟ್ಟಂತೆ ಈ ಪಶ್ಚಿಮ ಜಾಗರಪೂಜೆ ನಡೆಯುತ್ತೆ.