ಉಡುಪಿ:ಯಕ್ಷಗಾನ ಕಲಾರಂಗ ಸಂಸ್ಥೆಯ ವಿದ್ಯಾಪೋಷಕ್ ಕಾರ್ಯಕ್ರಮ ಮುಂದುವರೆದಿದೆ. ಜಿಲ್ಲೆಯ ಕಾರ್ಕಳ ತಾಲೂಕಿನ ಅಜೆಕಾರ್ನ ವಿದ್ಯಾಪೋಷಕ್ ಫಲಾನುಭವಿ ಅಂತಿಮ ಪದವಿ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ ‘ಶ್ರೀಗುರು’ ಹಸ್ತಾಂತರ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಡುಪಿಯ ವಿದ್ಯಾಪೋಷಕ್ ಫಲಾನುಭವಿಗೆ ‘ಶ್ರೀಗುರು’ ಮನೆ ಹಸ್ತಾಂತರ - Udupi house
ಉಡುಪಿ ಜಿಲ್ಲೆಯ ಯಕ್ಷಗಾನ ಕಲಾರಂಗ ಸಂಸ್ಥೆಯ ವಿದ್ಯಾಪೋಷಕ್ ಕಾರ್ಯಕ್ರಮದಡಿಯಲ್ಲಿ ಫಲಾನುಭವಿ ಅಂತಿಮ ಪದವಿ ವಿದ್ಯಾರ್ಥಿನಿ ನಿರೀಕ್ಷಾಳಿಗೆ ನವೀಕೃತ ಮನೆ ‘ಶ್ರೀಗುರು’ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಫಲಾನುಭವಿಗೆ ಮನೆ ಹಸ್ತಾಂತರ
ಸಂಸ್ಥೆ ಈವರೆಗೆ 18 ಮನೆಗಳನ್ನು ಕಟ್ಟಿಸಿಕೊಟ್ಟಿದ್ದು, ಇದೀಗ 19ನೇ ಮನೆ ನೀಡಿ ಸೇವೆ ಮುಂದುವರಿಸಿದೆ. ಫಾಸ್ಟ್ ಕೇಬಲ್, ಸಿಫೋರ್ ಯು ಚಾನಲ್ ಮಾಲೀಕ ಗುರುರಾಜ ಅಮೀನ್ ಮತ್ತು ಜಯಲಕ್ಷ್ಮೀ ಅಮೀನ್ ದಂಪತಿ ಜ್ಯೋತಿ ಬೆಳಗಿಸಿ ಮನೆ ಹಸ್ತಾಂತರಿಸಿದರು.
ಮನೆ ಸ್ವೀಕರಿಸಿದ ವಿದ್ಯಾರ್ಥಿನಿ ನಿರೀಕ್ಷಾ ಮಾತನಾಡಿ, ವಿದ್ಯಾಪೋಷಕ್ ವಿದ್ಯಾರ್ಥಿಗಳ ಎಲ್ಲಾ ರೀತಿಯ ಕಷ್ಟಕ್ಕೆ ಸ್ಪಂದಿಸುತ್ತದೆ. ನಾನು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗ ಪಡೆದ ಬಳಿಕ ನನ್ನಂತೆಯೇ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತೇನೆ. ದಾನಿ ಗುರುರಾಜ್ ದಂಪತಿಗೆ ಧನ್ಯವಾದ ಹೇಳಿದರು.