ಕರ್ನಾಟಕ

karnataka

By

Published : Oct 25, 2019, 8:38 PM IST

ETV Bharat / state

ಉಡುಪಿಯಲ್ಲಿ ಭಾರಿ ಗಾಳಿ ಮಳೆ: ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ

ಈವರೆಗೆ ಉಡುಪಿ ಜಿಲ್ಲೆಯಲ್ಲಿ 75 ಮಿ.ಮೀ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮೀನುಗಾರರು ಕಡಲಿಗಿಳಿಯದಂತೆ ಎಚ್ಚರಿಕೆ ನೀಡಿದೆ.

ಉಡುಪಿಯಲ್ಲಿ ಭಾರಿ ಗಾಳಿ ಮಳೆ

ಉಡುಪಿ: ಜಿಲ್ಲೆಯಲ್ಲಿ ನಾಳೆ ಗಂಟೆಗೆ 40 - 45 ಕಿ. ಮೀ ವೇಗದಲ್ಲಿ ಗಾಳಿ ಬೀಸುವ ಸಂಭವನೀಯತೆ ಇದೆ ಎಂದು ಹವಾಮಾನ ಇಲಾಖೆ ಸೂಚಿಸಿರುವುದರಿಂದ ಜಿಲ್ಲಾಡಳಿತ ನಾಳೆಯೂ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ.

ಉಡುಪಿಯಲ್ಲಿ ಭಾರಿ ಗಾಳಿ ಮಳೆ

ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದ ಹವಾಮಾನ ಇಲಾಖೆ, ನಾಳೆ ಕೂಡಾ ರೆಡ್ ಅಲರ್ಟ್​ ಘೋಷಿಸಿದೆ. ಈವರೆಗೆ ಉಡುಪಿ ಜಿಲ್ಲೆಯಲ್ಲಿ 75 ಮಿ.ಮೀ ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರು ಕಡಲಿಗಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

ಇನ್ನು ಪ್ರವಾಸಿಗರಿಗೂ ಕಡಲ ಕಿನಾರೆಯಲ್ಲಿ ನೀರಿಗಿಳಿಯದಂತೆ‌ ನಿರ್ಬಂಧ ಹೇರಲಾಗಿದೆ.

ABOUT THE AUTHOR

...view details