ಕರ್ನಾಟಕ

karnataka

ETV Bharat / state

ಹಿರಿಯ ಭಾಷಾವಿಜ್ಞಾನಿ ಡಾ. ಯು.ಪಿ. ಉಪಾಧ್ಯಾಯ ನಿಧನ! - ಡಾ. ಯು.ಪಿ. ಉಪಾಧ್ಯಾಯ ಲೆಟೆಸ್ಟ್ ನ್ಯೂಸ್

ತುಳು ಭಾಷೆಯ ಬೃಹತ್ ನಿಘಂಟು ರಚಿಸಿದ್ದ, ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿಸಿಕೊಂಡಿದ್ದ ಹಿರಿಯ ಭಾಷಾ ವಿಜ್ಞಾನಿ ಡಾ. ಯು.ಪಿ. ಉಪಾಧ್ಯಾಯ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

Dr.u p Upadhyaya died at yesterday night
Dr.u p Upadhyaya died at yesterday night

By

Published : Jul 18, 2020, 4:11 PM IST

ಉಡುಪಿ:ಹಿರಿಯ ಭಾಷಾ ವಿಜ್ಞಾನಿ ಹಾಗೂ ತುಳು ನಿಘಂಟು ತಜ್ಞರಾದ ಡಾ. ಯು.ಪಿ. ಉಪಾಧ್ಯಾಯ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ.

ಭಾಷಾ ವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯ ತುಳು ಭಾಷೆಯ ಬೃಹತ್ ನಿಘಂಟು ರಚಿಸಿದ್ದರು. ಉಪಾಧ್ಯಾಯ ದಂಪತಿ ತುಳು ಭಾಷಾ ಅಧ್ಯಯನಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇವರ ಪತ್ನಿ ಸುಶೀಲಾ ಪಿ. ಉಪಾಧ್ಯಾಯ ಕೂಡಾ ಹಲವಾರು ಕೃತಿಗಳನ್ನು ರಚಿಸಿದ್ದರು.

ಅಷ್ಟೇ ಅಲ್ಲದೆ, ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ಉಪಾಧ್ಯಾಯ ದಂಪತಿಗಳು ತಮ್ಮನ್ನು ತೊಡಗಿಸಿಕೊಂಡಿದ್ದರು. ಪತ್ನಿ ಸುಶೀಲಾ ಪಿ. ಉಪಾಧ್ಯಾಯ 2014ರಲ್ಲಿ ನಿಧನ ಹೊಂದಿದರು.

ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿರುವ ಡಾ.ಯು.ಪಿ. ಉಪಾಧ್ಯಾಯರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ಅಗಲಿಕೆಗೆ ಸಾಹಿತ್ಯ ವಲಯದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details