ಕರ್ನಾಟಕ

karnataka

ETV Bharat / state

ಕುಂದಾಪುರದಲ್ಲಿ ಶ್ವಾನ ದಾಳಿ: ಇಬ್ಬರು ಮಕ್ಕಳು ಸೇರಿ ಮೂವರಿಗೆ ಗಂಭೀರ ಗಾಯ

ಆಟವಾಡುತ್ತಿದ್ದ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ತಪ್ಪಿಸಲು ಹೋದ ಮಹಿಳೆಯ ಮೇಲೂ ದಾಳಿ ನಡೆಸಿವೆ. ಸದ್ಯ ಮೂವರ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶ್ವಾನ ದಾಳಿ

By

Published : Jun 20, 2019, 4:49 PM IST

ಉಡುಪಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಶ್ವಾನ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿರುವ ಘಟನೆ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಆಟವಾಡುತ್ತಿದ್ದ ಮಕ್ಕಳ ಮೇಲೆ ಶ್ವಾನ ದಾಳಿ

ಕುಂದಾಪುರದ ಕಂಡ್ಲೂರು ಸೇತುವೆ ಬಳಿಯ ತೊಪ್ಲು ಎಂಬಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಇಬ್ಬರು ಮಕ್ಕಳ ಮೇಲೆ ನಾಲ್ಕೈದು ಶ್ವಾನಗಳು ದಾಳಿ ಮಾಡಿವೆ. ಈ ಸಂದರ್ಭ ಶ್ವಾನ ದಾಳಿಯಿಂದ ಮಕ್ಕಳನ್ನು ತಪ್ಪಿಸಲು ಯತ್ನಿಸಿದ ಮಹಿಳೆಯ ಮೇಲೂ ನಾಯಿಗಳು ದಾಳಿ ಮಾಡಿವೆ. ದಾಳಿಯಿಂದ ಆದ್ವಿತ್(4), ಆಯೇಜಾ(3) ಹಾಗೂ ಕನಕ ಪೂಜಾರ್ತಿ(45) ಗಂಭೀರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಪ್ರದೇಶದಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ABOUT THE AUTHOR

...view details