ಉಡುಪಿ: ಜಿಲ್ಲೆಯ ಬೈಂದೂರು ಎಸ್ಐ ಸಂಗೀತಾ ಗೂಂಡಾಗಿರಿ ಮಾಡಿದ್ದು, ಹಾಪ್ಕಾಮ್ಸ್ ಮಳಿಗೆಗೆ ನುಗ್ಗಿ ವ್ಯಾಪಾರಿ ಮೇಲೆ ಲಾಠಿ ಬೀಸಿದ ಆರೋಪ ಇವರ ಮೇಲೆ ಕೇಳಿ ಬಂದಿದೆ.
ಅಂಗಡಿ ತೆರೆಯಲು ಜಿಲ್ಲಾಧಿಕಾರಿ ಆದೇಶವಿದ್ದರೂ ಬೈಂದೂರು ಎಸ್ಐನಿಂದ ಹಲ್ಲೆ: ಹಾಪ್ಕಾಮ್ಸ್ ವ್ಯಾಪಾರಿ - ಸಬ್ ಇನ್ಸ್ಪೆಕ್ಟರ್
ಜಿಲ್ಲಾಧಿಕಾರಿ ಅನುಮತಿ ನೀಡಿದ್ದ ಹಾಪ್ಕಾಮ್ಸ್ ಮಳಿಗೆಗಳನ್ನು ನಡೆಸುತ್ತಿದ್ದ ವ್ಯಕ್ತಿಯ ಮೇಲೆ ಬೈಂದೂರು ಮಹಿಳಾ ಎಸ್ಐ ಲಾಠಿಯಿಂದ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ.
ನಿನ್ನೆ ಉಡುಪಿ ಜಿಲ್ಲಾಧಿಕಾರಿ ಮೂರು ಹಾಪ್ಕಾಮ್ಸ್ ಮಳಿಗೆಗಳನ್ನು ತೆರೆಯಲು ಆದೇಶ ನೀಡಿದ್ದರು. ಬೆಳಗ್ಗೆ ಏಳು ಗಂಟೆಯಿಂದ ಸಂಜೆ 7 ಗಂಟೆಯ ತನಕ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಉಪ್ಪುಂದದ ಹಾಪ್ಕಾಮ್ಸ್ ಮಳಿಗೆ ತೆರೆಯಲಾಗಿತ್ತು. ಸ್ಥಳಕ್ಕೆ ಬಂದ ಬೈಂದೂರು ಎಸ್ಐ ಸಂಗೀತ ಹಾಪ್ಕಾಮ್ಸ್ ವ್ಯಾಪಾರಿ ಮೇಲೆ ಲಾಠಿಯಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ವ್ಯಾಪಾರಿ ತೋರಿಸಿದ್ದ ಜಿಲ್ಲಾಧಿಕಾರಿಯ ಆದೇಶಪ್ರತಿಯನ್ನು ಹರಿದು ಹಾಕಿ, ದರ್ಪ ತೋರಿಸಿದ್ದಾರೆ ಎಂದು ವ್ಯಾಪಾರಿ ಆರೋಪಿಸಿದ್ದಾರೆ. ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.