ಕಾರ್ಕಳ( ಉಡುಪಿ):ತಾಲೂಕಿನ ಮಾಳ ಗ್ರಾಮ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು. ಒಂದೇ ತಿಂಗಳಿನಲ್ಲಿ 13 ಮಂದಿ ಡೆಂಘೀ ಜ್ವರಕ್ಕೆ ಗುರಿಯಾಗಿದ್ದಾರೆ. ಅದೇ ಗ್ರಾಮದಲ್ಲಿ 15 ಕ್ಕೂ ಹೆಚ್ಚು ಮಂದಿ ಡೆಂಘೀ ಶಂಕಿತರು ಪತ್ತೆಯಾಗಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾದ ಮಾಳ ಗ್ರಾಮದಲ್ಲಿ ಹೆಚ್ಚಾಗಿ ಈ ಡೆಂಘೀ ಹಬ್ಬಿದ್ದು ಇದೀಗ ಕೊರೊನಾ ಸಾಂಕ್ರಮಿಕ ರೋಗದ ಭಯದ ಜೊತೆಗೆ ಡೆಂಘೀ ಮಹಾಮರಿ ಕಾಯಿಲೆಯ ಭಯದಿಂದ ಜೀವಿಸುವಂತಾಗಿದೆ.
ಹೆಚ್ಚು ಕೃಷಿಕರೇ ಹೊಂದಿರುವ ಮಾಳ ಗ್ರಾಮದಲ್ಲಿ ಅತೀಯಾದ ಅಡಿಕೆ ಬೆಳೆ ಹಾಗೂ ರಬ್ಬರ್ ಬೆಳೆಯುತ್ತಿದ್ದು, ಅಡಿಕೆ ಮರದಿಂದ ಕಾಲಕ್ರಮೇಣ ಉದುರುವ ಹಾಳೆಗಳು ಸೊಳ್ಳೆಗಳ ಅವಾಸ್ಥಾನವಾಗಿ ಮಾರ್ಪಟ್ಟು ಈ ಡೆಂಘೀ ಹರಡಲು ಕಾರಣವಾಗಿದೆ.
ಡೆಂಘೀ ಜ್ವರ ಲಕ್ಷಣ:
- ಇದ್ದಕ್ಕಿದ್ದಂತೆ ತೀವ್ರ ಜ್ವರ ಕಾಣಿಸಿಕೊಳ್ಳುವುದು
- ಕಣ್ಣಿನ ಹಿಂಭಾಗದದಲ್ಲಿ ವಿಪರೀತ ನೋವು
- ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು