ಕರ್ನಾಟಕ

karnataka

ETV Bharat / state

ಬಜರಂಗದಳ ನಿಷೇಧಿಸುವ ಪ್ರಸ್ತಾಪ ಕಾಂಗ್ರೆಸ್​ ಮುಂದಿಲ್ಲ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಸ್ಪಷ್ಟನೆ - ಬಜರಂಗದಳ ನಿಷೇಧ ಘೋಷಣೆ

ರಾಜ್ಯ ಸರ್ಕಾರ ಬಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಹಕ್ಕು ಹೊಂದಿಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ವೀರಪ್ಪ ಮೊಯ್ಲಿ
ಮಾಜಿ ಸಿಎಂ ವೀರಪ್ಪ ಮೊಯ್ಲಿ

By

Published : May 3, 2023, 10:27 PM IST

Updated : May 3, 2023, 10:40 PM IST

ಮಾಜಿ ಸಿಎಂ ವೀರಪ್ಪ ಮೊಯ್ಲಿ

ಉಡುಪಿ : ಬಜರಂಗದಳವನ್ನು ನಿಷೇಧಿಸುವ ಯಾವುದೇ ಪ್ರಸ್ತಾವ ಕಾಂಗ್ರೆಸ್ ಮುಂದೆ ಇಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದಾಗಲೂ ಬಜರಂಗದಳವನ್ನು ನಿಷೇಧ ಮಾಡುವ ಪ್ರಸ್ತಾಪ ಇರಲಿಲ್ಲ. ರಾಜ್ಯ ಸರ್ಕಾರ ಅಂತಹ ಸಂಘಟನೆಗಳನ್ನು ನಿಷೇಧಿಸುವ ಹಕ್ಕು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ದಾರ್ ವಲ್ಲಭಬಾಯಿ ಪಟೇಲ್ ಅವರನ್ನು ಈಗ ಬಿಜೆಪಿ ಆರಾಧಿಸುತ್ತದೆ. ಆದರೆ ಪಟೇಲ್ ಅವರು ಆರ್​ಎಸ್​ಎಸ್​ ಅನ್ನು ಬ್ಯಾನ್ ಮಾಡಿದ್ದರು. ಬಳಿಕ ಜವಾಹರಲಾಲ್ ನೆಹರು ನಿಷೇಧವನ್ನು ಹಿಂಪಡೆದಿದ್ದರು. ಬಜರಂಗದಳದಂತಹ ಸಂಘಟನೆಯನ್ನು ನಿಷೇಧಿಸುವ ಪ್ರಸ್ತಾಪ ನಮ್ಮ ಮುಂದಿಲ್ಲ. ಇದನ್ನು ನಮ್ಮ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೇ ಸ್ಪಷ್ಟಪಡಿಸುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ; ಬಜರಂಗದಳ PFIದಂತಹ ಸಂಘಟನೆಗಳ ನಿಷೇದದ ಆಶ್ವಾಸನೆ: ರಾಜ್ಯ ಕಾಂಗ್ರೆಸ್‌ನ ಮಹತ್ವಾಕಾಂಕ್ಷಿ ಪ್ರಣಾಳಿಕೆ ಬಿಡುಗಡೆ ನಿನ್ನೆ (ಮೇ​ 2-2023) ನೆರವೇರಿತು. ನಗರದ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಬಜರಂಗದಳ, ಪಿಎಫ್‌ಐಗಳಂತಹ ಸಂಘಟನೆಗಳ ಮೇಲೆ ಕಾನೂನು ಕ್ರಮ ಇಲ್ಲವೇ ನಿಷೇಧವನ್ನು ಸೇರಿ ಹಲವು ಅಂಶಗಳನ್ನು ಜನರಿಗೆ ಭರವಸೆ ನೀಡಲಾಗಿತ್ತು.

ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ-ಡಿ ಕೆ ಶಿವಕುಮಾರ್​ :ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ. ಬಿಜೆಪಿಯವರು ಯಾವ ರೀತಿ ಬೇಕಾದ್ರೂ ನೆರೇಷನ್ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಹಮ್ಮಿಕೊಂಡಿದ್ದ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಜರಂಗದಳಕ್ಕೂ ಆಂಜನೇಯನಿಗೂ ಏನು ಸಂಬಂಧ? ನಾನು ಕೂಡ ರಾಮ, ಆಂಜನೇಯ, ಶಿವನ ಭಕ್ತ. ನಾನು ಕೂಡ ದಿನ ಹನುಮಾನ್ ಚಾಲೀಸಾ ಪಠಣ ಮಾಡುತ್ತೇನೆ. ಕುಂಬಳಕಾಯಿ ಕಳ್ಳ ಅಂದ್ರೆ ಇವರ್ಯಾಕೆ ಹೆಗಲು ಮುಟ್ಟಿ ನೋಡಿಕೊಳ್ತಾ ಇದ್ದಾರೆ ಎಂದು ತಿರುಗೇಟು ಕೊಟ್ಟರು.

ಇದನ್ನೂ ಓದಿ:ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ ಭಜರಂಗದಳ PFIದಂತಹ ಸಂಘಟನೆಗಳ ನಿಷೇದದ ಆಶ್ವಾಸನೆ ಜನರಿಗೆ ಮತ್ತಷ್ಟು ಉಚಿತಗಳ ಭರವಸೆ

ನಾವು ಆಂಜನೇಯ ಭಕ್ತರು. ಅವರು ಮಾತ್ರನಾ? ಶಾಂತಿಯ ತೋಟ ಕದಡಬಾರದು. ಸೌಹಾರ್ದತೆ ಇರಬೇಕು. ಬಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯಗೂ ಬಜರಂಗದಳಕ್ಕೂ ಏನ್ ಸಂಬಂಧ. ಬಿಜೆಪಿ ಅವರು, ಬಹಳ ಪ್ರವೋಕ್ ಮಾಡ್ತಿದ್ದಾರೆ. ಜನಕ್ಕೆ ಇದು ಅರ್ಥ ಆಗಿದೆ. ನಾವು ಹನುಮಂತ ಭಕ್ತರು ನಾವು ಆಂಜನೇಯ ಪ್ರವೃತ್ತಿ. ಆಂಜನೇಯ ಬೇರೆ ಬಜರಂಗದಳ ಬೇರೆ. ಬಿಜೆಪಿಯವರು ಬಜರಂಗಿ ಅಂತ ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ರಿ, ಉದ್ಯೋಗ ಏನ್ ಕೊಟ್ರಿ ಹೇಳಿ ಎಂದು ಡಿ ಕೆ ಶಿವಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ:ಬಜರಂಗದಳ ನಿಷೇಧ ಘೋಷಣೆ ವಾಪಸ್ ಪಡೆಯೋದಿಲ್ಲ ಡಿ ಕೆ ಶಿವಕುಮಾರ್​

Last Updated : May 3, 2023, 10:40 PM IST

ABOUT THE AUTHOR

...view details