ಕರ್ನಾಟಕ

karnataka

ETV Bharat / state

ಕಲಾವಿದನ ಕುಂಚದಲ್ಲಿ ಅರಳಿದ ಕಲಾಕೃತಿಗಳು ; ವೀಕ್ಷಣೆಗೆ ಉಡುಪಿಯ ಈ ಆರ್ಟ್‌ ಗ್ಯಾಲರಿ ಕೈಬೀಸಿ ಕರೆಯುತ್ತಿದೆ - ಕಲಾ ಗ್ಯಾಲರಿ

ವೃತ್ತಿಯಲ್ಲಿ ಡ್ರಾಯಿಂಗ್ ಅಧ್ಯಾಪಕರಾಗಿರುವ ವೆಂಕಿ ಅವರ ಕೈಯಲ್ಲಿ ತುಳುನಾಡಿನ ಭೂತಾರಾಧನೆ, ಯಕ್ಷಗಾನ, ಕಂಬಳ, ಜನಪದ ಸಂಸ್ಕ್ರತಿ, ಗ್ರಾಮೀಣ ಬದುಕು ಸಹಿತ ಬುದ್ಧ, ವಿಶ್ವೇಶ್ವರಯ್ಯ, ಮೀರಾ ಬಾಯಿ ಮುಂತಾದ ಕಲಾಕೃತಿಗಳು ಮೂಡಿ ಬಂದಿರುವುದು ವಿಶೇಷವಾಗಿದೆ..

Clay Art in palimaru chitralaya Art Gallery in Udupi District
ಕಲಾವಿದನ ಕುಂಚದಲ್ಲಿ ಅರಳಿರುವ ಕಲಾಕೃತಿಗಳ ವೀಕ್ಷಣೆಗೆ ಉಡುಪಿಯ ಈ ಆರ್ಟ್‌ ಗ್ಯಾಲರಿ ಕೈಬೀಸಿ ಕರೆಯುತ್ತಿದೆ

By

Published : Jul 19, 2021, 10:15 PM IST

ಉಡುಪಿ :ಯಕ್ಷರಂಗದ ಮೇಲೆ ಹೆಜ್ಜೆ ಹಾಕಲು ಸಜ್ಜಾದ ಕಲಾವಿದ, ಮಕ್ಕಳು ಪಾಠ ಕೇಳುವುದು, ನಂದಿ, ಕುದುರೆ, ವಿಶ್ವೇಶ್ವರಯ್ಯ ಸಹಿತ ನೂರಾರು ಮಣ್ಣಿನ ಕಲಾ ಪ್ರಕಾರಗಳು. ಹೀಗೆ ನೂರಾರು ಬಗೆಯ ವಿಶಿಷ್ಟ ಕಲಾ ಪ್ರಕಾರಗಳು ಇರೋದು ಉಡುಪಿ ಜಿಲ್ಲೆಯ ಪಲಿಮಾರು ಚಿತ್ರಾಲಯದ ಆರ್ಟ್ ಗ್ಯಾಲರಿಯಲ್ಲಿ. ಇದರ ಹಿಂದಿನ ಕಲಾವಿದ ವೆಂಕಟರಮಣ ಕಾಮತ್ ಎನ್ನುವವರು. ಇವರು ವೆಂಕಿ ಪಲಿಮಾರ್ ಅಂತಾನೇ ಖ್ಯಾತಿ ಪಡೆದಿದ್ದಾರೆ.

ಸುಂದರ ಕಲಾಕೃತಿಗಳಿರುವ ಉಡುಪಿಯ ಈ ಆರ್ಟ್‌ ಗ್ಯಾಲರಿ ಕೈಬೀಸಿ ಕರೆಯುತ್ತಿದೆ..

ವೆಂಕಿ ಪಲಿಮಾರ್, ಬಾಲ್ಯದಿಂದಲೂ ಮಣ್ಣಿನೊಂದಿಗೆ ಆಟವಾಡುತ್ತಾ ಇಂತಹ ವಿಶಿಷ್ಟ ಕಲೆಯನ್ನು ಏಕಲವ್ಯನಂತೆ ಗುರು ಇಲ್ಲದೇ ಕಲಿತ ವಿಶಿಷ್ಟ ಕಲಾವಿದ. ಆವೆ ಮಣ್ಣು ತಂದು ಹದವಾಗಿ ಕಲಸಿ ಅದನ್ನು ಗಡಿಗೆಯಿಂದ ಬಡಿದು ಹದ ಮಾಡುತ್ತಾರೆ. ಬಳಿಕ ಈ ಮಣ್ಣಿನಿಂದ ತಮ್ಮ ಕಲ್ಪನೆಯನ್ನು ಕೈಯಲ್ಲಿ ಮೂಡಿಸುವ ಇವರ ಕೈಚಳಕ ನೋಡುಗರನ್ನು ನೆಬ್ಬೆರಗಾಗಿಸುತ್ತದೆ.

ವೃತ್ತಿಯಲ್ಲಿ ಡ್ರಾಯಿಂಗ್ ಅಧ್ಯಾಪಕರಾಗಿರುವ ವೆಂಕಿ ಅವರ ಕೈಯಲ್ಲಿ ತುಳುನಾಡಿನ ಭೂತಾರಾಧನೆ, ಯಕ್ಷಗಾನ, ಕಂಬಳ, ಜನಪದ ಸಂಸ್ಕ್ರತಿ, ಗ್ರಾಮೀಣ ಬದುಕು ಸಹಿತ ಬುದ್ಧ, ವಿಶ್ವೇಶ್ವರಯ್ಯ, ಮೀರಾ ಬಾಯಿ ಮುಂತಾದ ಕಲಾಕೃತಿಗಳು ಮೂಡಿ ಬಂದಿರುವುದು ವಿಶೇಷವಾಗಿದೆ.

ಇದನ್ನೂ ಓದಿ: ಧರ್ಮ ಸಾಮರಸ್ಯದಲ್ಲಿ ಅರಳಿತು ದೇವಾಲಯ: ಕರಾವಳಿಯಲ್ಲಿ 'ಸಿದ್ಧಿ'ಸಿತು ಕೋಮು ಸೌಹಾರ್ದತೆ

ವೆಂಕಿ ಪಲಿಮಾರು ಅವರು ಕೇವಲ ಮಣ್ಣಿನಿಂದ ಕಲಾಕೃತಿಗಳನ್ನು ತಯಾರಿಸುವುದು ಮಾತ್ರವಲ್ಲದೇ, ಜಲವರ್ಣ, ಮರಳು ಶಿಲ್ಪ, ತೈಲವರ್ಣ ಥರ್ಮಕೋಲ್ ಕಲಾಕೃತಿಗಳನ್ನು ರಚಿಸುವುದರಲ್ಲೂ ನೈಪುಣ್ಯತೆ ಗಳಿಸಿದ್ದಾರೆ. ಇನ್ನೂ, ಆಸಕ್ತರಿಗೆ ಉಚಿತವಾಗಿ ಈ ವಿಶೇಷ ಕಲೆಯನ್ನು ಹೇಳಿ ಕೊಡುತ್ತಿದ್ದು, ದೇಶ-ವಿದೇಶಗಳಿಂದಲೂ ಆಸಕ್ತರು ಇವರಿದ್ದಲ್ಲಿಗೆ ಬಂದು ಮಣ್ಣಿನ ಕಲೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ.

ಅಂದಹಾಗೆ ವಿಶೇಷ ಕಲಾಕೃತಿಗಳನ್ನು ನೋಡಲು, ಕಲಾಸಕ್ತರು ಬರುತ್ತಿದ್ದು, ನೀವು ಕೂಡ ಉಡುಪಿ ಕಡೆ ಬಂದ್ರೆ ಚಿತ್ರಾಯಲಕ್ಕೆ ಭೇಟಿ ನೀಡಿ ವಿಶೇಷ ಅನುಭವ ಪಡೆದುಕೊಳ್ಳಿ. ಮಣ್ಣಿನ ಕಲೆಯಲ್ಲಿ ಆಸಕ್ತಿ ಇದ್ರೆ ಉಚಿತವಾಗಿ ಕಲಿಯಬಹುದಾಗಿದೆ.

ABOUT THE AUTHOR

...view details