ಉಡುಪಿ:ಇನ್ನೇನು ಡಿಪ್ಲೋಮಾ ಮುಗಿಸಿ ಮಗ ಕೆಲಸಕ್ಕೆ ಸೇರಿ ಕೈತುಂಬಾ ಸಂಪಾದನೆ ಮಾಡ್ತಾನೆ. ನಮ್ಮ ಬಡತನವೆಲ್ಲ ಕೊನೆಯಾಗುತ್ತೆ ಅಂತ ಪೋಷಕರು ನೂರಾರು ಕನಸು ಇಟ್ಟುಕೊಂಡಿದ್ರು. ಆದ್ರೆ ವಿಧಿ ಬರಹವೇ ಬೇರೆಯಾಗಿತ್ತು!
ಅದೊಂದು ದಿನ ಕಾಲೇಜು ಮುಗಿಸಿ ಮನೆಗೆ ಬಂದ ಕೃಷ್ಣ ಆಚಾರ್ಯರ ಮಗ ಕಿರಣ್ ಕುರ್ಚಿಯಲ್ಲಿ ಕುಳಿತ್ತಿದ್ದ ಅಷ್ಟೇ. ಏಕಾಏಕಿ ಆಯತಪ್ಪಿ ಕೆಳಗೆ ಬಿದ್ದು, ಮೆದುಳು,ತಲೆಯ ಭಾಗದ ನರ ಡ್ಯಾಮೇಜ್ ಆಗಿ ತನ್ನೆಲ್ಲ ನೆನಪಿನ ಶಕ್ತಿ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ.
ಉಡುಪಿಯ ಬೊಮ್ಮರಬೆಟ್ಟು ಗ್ರಾಮದ ಪಂಚನಬೆಟ್ಟುವಿನ ಕೃಷ್ಣ ಮೂರ್ತಿ ಆಚಾರ್ಯರು ಮತ್ತು ಕುಶಾಲ ಆಚಾರ್ಯ ದಂಪತಿಗೆ ಇಬ್ಬರು ಮಕ್ಕಳು. ಆದರೆ ಇವರ ಬಾಳಿಗೆ ಬಡತನವೇ ಶಾಪ. ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇವರು, ಕಷ್ಟಪಟ್ಟು ಮಗ ಕಿರಣ್ ಡಿಪ್ಲೊಮಾ ಕೋರ್ಸ್ಗೆ ಸೇರಿಸಿದ್ದರು. ಆದರೆ ಇದೀಗ ಆತ ಹಾಸಿಗೆ ಹಿಡಿದಿದ್ದು, ನೆರವಿನ ಹಸ್ತ ಕೇಳ್ತಿದ್ದಾರೆ. ತಂದೆ ಪ್ರತಿನಿತ್ಯ ಮಗನ ಸೇವೆ ಮಾಡುತ್ತಿದ್ದು, ಈಗಾಗಲೇ ಮಗನ ಚಿಕಿತ್ಸೆಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಕಿತ್ತು ತಿನ್ನುವ ಬಡತನದಲ್ಲಿ ಮಗನನ್ನು ಉಳಿಸಿಕೊಳ್ಳಲು ದಾರಿ ತೋಚದೇ ಸಹಾಯಕ್ಕಾಗಿ ದಾನಿಗಳ ಬಳಿ ಅಂಗಲಾಚುತ್ತಿದ್ದಾರೆ. ದಾನಿಗಳು ಈ ಕೆಳಗಿನ ಬ್ಯಾಂಕ್ ವಿಳಾಸಕ್ಕೆ ಧನಸಹಾಯ ನೀಡಬಹುದು.