ಕುಂದಾಪುರ: ಸ್ಕೂಟರ್ನಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಶಾಲಾ ಶಿಕ್ಷಕ ಸ್ಕಿಡ್ ಆಗಿ ಗದ್ದೆಗೆ ಬಿದ್ದ ಪರಿಣಾಮ ಮೇಲೇಳಲಾಗದೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಎಂಬಲ್ಲಿ ನಡೆದಿದೆ.
ಕುಂದಾಪುರ: ಗದ್ದೆಯಂಚಲ್ಲಿ ಸ್ಕೂಟರ್ ಸ್ಕಿಡ್ ಆಗಿ ಶಿಕ್ಷಕ ಸಾವು - kannadanews
ಸ್ಕೂಟರ್ನಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ ವೇಳೆ ಶಾಲಾ ಶಿಕ್ಷಕ ಸ್ಕಿಡ್ ಆಗಿ ಗದ್ದೆಗೆ ಬಿದ್ದ ಪರಿಣಾಮ ಮೇಲೇಳಲಾಗದೆ ಸ್ಥಳದಲ್ಲೇ ಸಾವಿಗೀಡಾದ ಘಟನೆ ಬ್ರಹ್ಮಾವರ ಸಮೀಪದ ಹಂಗಾರಕಟ್ಟೆ ಎಂಬಲ್ಲಿ ನಡೆದಿದೆ.
ಸುರೇಶ್ ತಿಂಗಳಾಯ (37) ಮೃತ ಶಿಕ್ಷಕ. ಇವರು ಕುಂದಾಪುರದ ವೆಂಕಟರಮಣ ಆಂಗ್ಲಮಾಧ್ಯಮ ಶಾಲಾ ಶಿಕ್ಷಕ ಹಾಗೂ ಹಂಗಾರಕಟ್ಟೆ ನಿವಾಸಿ ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಸುರೇಶ್ ತಿಂಗಳಾಯ ಕಳೆದ ಹನ್ನೆರಡು ವರ್ಷಗಳಿಂದ ವೆಂಕಟರಮಣ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಶುಕ್ರವಾರ ಸಂಜೆ ಶಾಲೆ ಮುಗಿಸಿ ಮನೆಗೆ ತನ್ನ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಗದ್ದೆಯಂಚಿನಲ್ಲಿ ಸ್ಕೂಟರ್ನಲ್ಲಿ ಹೋಗುತ್ತಿರುವ ಸಂದರ್ಭ ಸ್ಕಿಡ್ ಆಗಿ ಗದ್ದೆಗೆ ಬಿದ್ದಿದ್ದಾರೆ. ಕವುಚಿ ಬಿದ್ದ ಪರಿಣಾಮ ಮೇಲೇಳಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.