ಉಡುಪಿ:ದೇಶ ವಿಭಜನೆ ಮಾಡುವ ಮೊದಲು ದೇಹ ವಿಭಜನೆ ಮಾಡಿ ಎಂದಿದ್ದರು ಗಾಂಧಿ. ವಿಭಜನೆ ನಂತರ ಇಬ್ಬರು ದೇಶದ ಪ್ರಮುಖ ನಾಯಕರಾದರು. ಫೆಂಟಾಸ್ಟಿಕ್ ನಾನ್ ಸೆನ್ಸ್ ಎಂದ ನೆಹರೂ ಪ್ರಧಾನಿಯಾದರು. ನೆಹರೂ ಮತ್ತು ತಂಡ ಹೇಡಿಗಳು. ನೆಹರೂ ಕುರ್ಚಿಗಾಗಿ ದೇಶದ ಮಾನ ಕಳೆದರು. ಅಧಿಕಾರಕ್ಕಾಗಿ ದೇಶವನ್ನು ತುಂಡು ಮಾಡಿದರು ಅಂತಾ ಅರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ದೇಶ ವಿಭಜನೆ ಮಾಡುವ ಮೊದಲು ದೇಹ ವಿಭಜನೆ ಮಾಡಿ ಎಂದಿದ್ದರು ಗಾಂಧಿ: ಕಲ್ಲಡ್ಕ ಪ್ರಭಾಕರ ಭಟ್ - ಪೌರತ್ವ ಕಾಯಿದೆ ಜನಜಾಗೃತಿ ಸಮಾವೇಶ
ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯಿದೆ ಜನಜಾಗೃತಿ ಸಮಾವೇಶದಲ್ಲಿ ಅರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಅವರು ದಿಕ್ಸೂಚಿ ಭಾಷಣ ಮಾಡಿದರು.
ಉಡುಪಿಯ ಕಟಪಾಡಿಯಲ್ಲಿ ಪೌರತ್ವ ಕಾಯಿದೆ ಜನಜಾಗೃತಿ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, 72 ವರ್ಷದಲ್ಲಿ ದೇಶ ಭೂಮಿ ಕಳೆದುಕೊಂಡಿತು. ಭಾರತ ಹಿಂದೂಗಳನ್ನು ಕಳೆದುಕೊಳ್ಳುತ್ತಿದೆ. ಅದ್ಭುತ ಹಿಂದೂ ಸಮಾಜ ಪಾತಾಳಕ್ಕೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಂಬೇಡ್ಕರ್ ರಾಷ್ಟ್ರೀಯ ನಾಯಕ. ಒಂದು ಜಾತಿಗೆ ಸೀಮಿತ ಮಾಡಿದ್ದು ನಮ್ಮ ದುರ್ದೈವ. ಅಂಬೇಡ್ಕರ್ ಹೇಳಿದಂತೆ ಮಾಡಬೇಕಿತ್ತು. ಭಾರತದ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋಗಲಿ ಎಂದಿದ್ದರು ಪಾಕ್ ಹಿಂದೂಗಳು ಭಾರತಕ್ಕೆ ಬರಲಿ ಎಂದು ಸಲಹೆ ಕೊಟ್ಟಿದ್ದರು ಅಂಬೇಡ್ಕರ್ ಎಂದರು. ಭಾರತದಲ್ಲಿ ಲಕ್ಷ ಲಕ್ಷ ಮಸೀದಿ, ಚರ್ಚ್ ಕಟ್ಟಿದ್ದಾರೆ. ನಮ್ಮ ದೇಶ ನಮ್ಮ ಭೂಮಿಯಲ್ಲಿ ಇಷ್ಟೆಲ್ಲ ಕಟ್ಟಿ ನಮನ್ನೇ ವಿರೋಧಿಸ್ತಾರೆ. ಪೌರತ್ವ ಕಾನೂನು ಬಂದದ್ದು ಪಾಕಿಸ್ತಾನದ ಪಾಪಿಗಳ ವಿರುದ್ಧ ಎಂದರು. ಭಾಷಣದುದ್ದಕ್ಕೂ ಕಲ್ಲಡ್ಕ ಪ್ರಭಾಕರ್ ಭಟ್ವಿವಾದಾತ್ಮಕ ಹೇಳಿಕೆಗಳನ್ನ ನೀಡಿದ್ದಾರೆ.