ಕರ್ನಾಟಕ

karnataka

By

Published : Mar 11, 2021, 6:11 PM IST

Updated : Mar 11, 2021, 6:23 PM IST

ETV Bharat / state

ಕೊರೊನಾ ಬಂದ ಮೇಲೆ ಅಸ್ತಮಾ, ಅಂಟುರೋಗ, ಎಚ್‌1ಎನ್‌1 ಕಾಣೆ: ವೈದ್ಯರು

ಮಹಾಮಾರಿ ಕೊರೊನಾ ವಿಶ್ವದ ಜನರನ್ನು ಜರ್ಜರಿತರನ್ನಾಗಿ ಮಾಡಿದೆ. ಕೋವಿಡ್ ಬಾಧಿಸಿದವರಿಗೆ ಸಾಕಷ್ಟು ದೈಹಿಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಈ ನಡುವೆ ಕುತೂಹಲಕಾರಿ ಅಂಶವೊಂದನ್ನು ಉಡುಪಿಯ ವೈದ್ಯರು ಬಿಚ್ಚಿಟ್ಟಿದ್ದಾರೆ.

Udupi doctor information
ಉಡುಪಿ ವೈದ್ಯರ ಮಾಹಿತಿ

ಉಡುಪಿ:ಮಹಾಮಾರಿ ಕೊರೊನಾ ಇಡೀ ಭಾರತ ಸೇರಿದಂತೆ ಇಡೀ ದೇಶವನ್ನು ಒಂದು ವರ್ಷ ಹಿಂಡಿಹಿಪ್ಪೆ ಮಾಡಿದೆ. ಆರ್ಥಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರವನ್ನು ಒಂದು ಬಾರಿ ಅಲ್ಲಾಡಿಸಿ ಬಿಟ್ಟಿದೆ. ಸಾಂಕ್ರಾಮಿಕ ರೋಗದ ಕಾಟದ ಜೊತೆ ಒಂದು ಪಾಠವನ್ನೂ ಹೇಳಿಕೊಟ್ಟಿದೆ.

ಕೋವಿಡ್ ಬಂದ ನಂತರ ಜನಸಾಮಾನ್ಯರಲ್ಲಿ ಸಾಕಷ್ಟು ಪಾಸಿಟಿವ್ ಬದಲಾವಣೆಗಳೂ ಕೂಡಾ ಆಗಿವೆ. ಶ್ವಾಸಕೋಶ ಸಂಬಂಧಿ ಕಾಯಿಲೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿವೆ. ಟಿಬಿ, ನ್ಯುಮೋನಿಯಾ ಖಾಯಿಲೆಗಳ ಹೊಸ ಕೇಸುಗಳು ದಾಖಲಾಗುತ್ತಿಲ್ಲ. 2019ರಲ್ಲಿ ಉಡುಪಿ ಜಿಲ್ಲೆಯಲ್ಲಿ 476 ಎಚ್1 ಎನ್ 1 ಕೇಸುಗಳು ದಾಖಲಾಗಿದ್ದವು. 2020ರಲ್ಲಿ ಈ ಸಂಖ್ಯೆ 124 ಕ್ಕೆ ಇಳಿಕೆಯಾಗಿದೆ. ಇದಕ್ಕೆ ಕಾರಣ ಮಾಸ್ಕ್, ಸಾಮಾಜಿಕ ಅಂತರವೇ ಕಾರಣ ಎನ್ನುತ್ತಾರೆ ವೈದ್ಯರು.

ಉಡುಪಿ ವೈದ್ಯರ ಮಾಹಿತಿ

ಜನರು ಮಾಸ್ಕ್ ಹಾಕಿದ್ರಿಂದ ಅಸ್ತಮಾ, ಅಂಟುರೋಗ, ಅಲರ್ಜಿ ಕಡಿಮೆಯಾಗಿದೆ. ಹೊಟ್ಟೆ ಸಂಬಂಧಿ, ನೀರಿನಿಂದ ಬರುವ ರೋಗಗಳು ಕಾಣಿಸಿಕೊಳ್ಳುತ್ತಿಲ್ಲ. ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ಆಸ್ಪತ್ರೆಗಳ ವರದಿಗಳು ಜಿಲ್ಲಾ ವೈದ್ಯಾಧಿಕಾರಿಗಳ ಕೈಸೇರಿದ್ದು, ಅಲ್ಲಿಯೂ ಸಾಂಕ್ರಾಮಿಕ ರೋಗಿಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ.

ಇದನ್ನೂ ಓದಿ: ದುಬೈನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿಗೆ 'ಸೌತ್ ಆಫ್ರಿಕಾ ವೈರಸ್': ಬೆಂಗಳೂರಿನಿಂದ ಬಸ್​ನಲ್ಲಿ ಪ್ರಯಾಣಿಸಿದ್ದ ಸೋಂಕಿತ

ಇದರಿಂದ ಮಾಸ್ಕ್ ಹಾಕಿಕೊಂಡ್ರೆ, ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಪಾಲಿಸಿದ್ರೆ ಒಳ್ಳೆದು ಅಂತ ಪ್ರೂವ್ ಆಗಿದೆ. ಸರ್ಕಾರದ ಕೊರೊನಾ ನಿಯಮದಿಂದ ಶಾಲಾ ಮಕ್ಕಳಲ್ಲಿ ಕಂಡುಬರುವ ಶೀತ, ಕೆಮ್ಮು, ಜ್ವರ, ಕಜ್ಜಿ ಮತ್ತಿತರ ಅಂಟುರೋಗ ಸಂಪೂರ್ಣ ಕಡಿಮೆಯಾಗಿದೆ.

Last Updated : Mar 11, 2021, 6:23 PM IST

ABOUT THE AUTHOR

...view details