ಕರ್ನಾಟಕ

karnataka

ETV Bharat / state

ಉಡುಪಿಯ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ವಂತಿಕೆ ಜೊತೆ ಮತಯಾಚನೆ - ಅಮೃತ ಶೆಣೈ

ಉಡುಪಿಯ ಪಕ್ಷೇತರ ಅಭ್ಯರ್ಥಿ ಹಿಂದೆ ಜಿಲ್ಲಾ ಕಾಂಗ್ರೆಸ್ ಯುವ ನಾಯಕರಾಗಿದ್ದ ಅಮೃತ ಶೆಣೈ ಅವರು ಉಡುಪಿಯ ನಗರದಲ್ಲಿ ಚುನಾವಣಾ ಖರ್ಚಿಗಾಗಿ ವಂತಿಕೆ ಸಂಗ್ರಹಿಸುತ್ತಾ ಮತಯಾಚಿಸಿದ್ದಾರೆ.

ಅಮೃತ ಶೆಣೈ ಮತಯಾಚನೆ

By

Published : Mar 28, 2019, 11:00 PM IST

ಉಡುಪಿ : ಉಡುಪಿ ಜಿಲ್ಲಾ ಕಾಂಗ್ರೆಸ್ ಯುವ ನಾಯಕ ಎಐಸಿಸಿ ಸದಸ್ಯ ಅಮೃತ ಶೆಣೈ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೆ ಇಂದು ನಗರದ ಹಲವೆಡೆ ವಂತಿಕೆ ಸಂಗ್ರಹಿಸುತ್ತಾ ಮತಯಾಚಿಸಿದರು.

ಉಡುಪಿಯಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಿಂದ ವಂತಿಕೆ ಜೊತೆಮತಯಾಚನೆ

ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟು ಕೊಟ್ಟಿದ್ದು ಮತ್ತು ಬಿಟ್ಟುಕೊಟ್ಟ ಕ್ಷೇತ್ರಕ್ಕೆ ಮತ್ತೆ ಕಾಂಗ್ರೆಸ್ ಮಾಜಿ ಸಚಿವ ಟಿಕೆಟ್ ಆಕಾಂಕ್ಷಿ ಪ್ರಮೋದ್ ಮಧ್ವರಾಜ್ ಜೆಡಿಎಸ್ ಬಿ ಫಾರಂ ಮೂಲಕ ಮೈತ್ರಿ ಅಭ್ಯರ್ಥಿಯಾಗಿರುವ ಕುರಿತು ಬೇಸರ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್‍ನ ರಾಜ್ಯ ಮತ್ತು ರಾಷ್ಟ್ರ ನಾಯಕರ ಗಮನ ಸೆಳೆಯಲು ಮತ್ತು ಜಿಲ್ಲೆಯಲ್ಲಿ ಸದೃಢವಾಗಿರುವ ಕಾಂಗ್ರೆಸ್ ಪಕ್ಷ ಸೀಟು ಬಿಟ್ಟು ಕೊಟ್ಟ ವಿಚಾರ ವಿರೋಧಿಸಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ತಿಳಿಸಿದರು.

ಅಲ್ಲದೇ ಚುನಾವಣಾ ಖರ್ಚಿಗಾಗಿ ಮತಯಾಚನೆಯ ಜೊತೆಗೆ ವಂತಿಗೆ ಸಂಗ್ರಹ ಮಾಡುತ್ತಿರುವುದಾಗಿ ತಿಳಿಸಿದರು.


ABOUT THE AUTHOR

...view details