ಕರ್ನಾಟಕ

karnataka

ETV Bharat / state

ಹಿರಿಯಡ್ಕ: ವರ್ಷವಿಡೀ ನೀರುಣಿಸುತ್ತಿದ್ದ ಧರ್ಮದ ಬಾವಿ ಕುಸಿತ - ಬಾವಿ

ಕಳೆದ ಎರಡು ದಿನಗಳ ಹಿಂದಿನವರೆಗೂ ಈ ಬಾವಿಯ ನೀರನ್ನು ಸ್ಥಳೀಯರು ಉಪಯೋಗಿಸುತ್ತಿದ್ದು, ಎರಡು ದಿನಗಳ ಹಿಂದೆ ಸ್ವಲ್ಪ ಕುಸಿತ ಕಂಡಿದ್ದ ಬಾವಿ ಇದೀಗ ನಿನ್ನೆ ಸಂಜೆ ಸಂಪೂರ್ಣವಾಗಿ ಆವರಣ ಸಹಿತ ಕುಸಿದು ಬಿದ್ದಿದೆ.

ಬಾವಿ ಕುಸಿತ

By

Published : Jun 29, 2019, 9:45 AM IST

ಉಡುಪಿ: ಹಿರಿಯಡ್ಕ ಬಸ್ ನಿಲ್ದಾಣದ‌ ರಸ್ತೆಯ ಮಧ್ಯ ಭಾಗದಲ್ಲಿರುವ ಬಾವಿಯೊಂದು ಸಂಪೂರ್ಣ ಕುಸಿತ ಕಂಡಿದೆ.

ಕಳೆದ ನೂರಾರು ವರ್ಷಗಳಿಂದ ಈ ಭಾಗದ ಸ್ಥಳೀಯರು ಮತ್ತು ಹೋಟೆಲ್ ಮಂದಿ ಈ ಬಾವಿಯನ್ನು ನೀರಿಗಾಗಿ ನಿರಂತರ ಬಳಕೆ ಮಾಡುತ್ತಿದ್ದರು. ವರ್ಷವಿಡೀ ನೀರು ತುಂಬಿರುತ್ತಿದ್ದ ಈ ಬಾವಿಯನ್ನು ಧರ್ಮದ ಬಾವಿ ಎಂದು ಕರೆಯುತ್ತಿದ್ದರು.

ಕಳೆದ ಎರಡು ದಿನಗಳ ಹಿಂದಿನವರೆಗೂ ಈ ಬಾವಿಯ ನೀರನ್ನು ಸ್ಥಳೀಯರು ಉಪಯೋಗಿಸುತ್ತಿದ್ದು, ಎರಡು ದಿನಗಳ ಹಿಂದೆ ಸ್ವಲ್ಪ ಕುಸಿತ ಕಂಡಿದ್ದ ಬಾವಿ ಇದೀಗ ನಿನ್ನೆ ಸಂಜೆ ಸಂಪೂರ್ಣವಾಗಿ ಆವರಣ ಸಹಿತ ಕುಸಿದು ಬಿದ್ದಿದೆ.

ಹಿರಿಯಡ್ಕ ದೇವಸ್ಥಾನದ ಎದುರು ಭಾಗ ಮತ್ತು ರಸ್ತೆ ಮಧ್ಯದಲ್ಲಿರುವ ಬಾವಿ ಇದಾಗಿರುವುದರರಿಂದ ಸುರಕ್ಷತಾ ದೃಷ್ಟಿಯಿಂದ ಬಾವಿಯನ್ನು ಸಂಪೂರ್ಣವಾಗಿ ಮಣ್ಣು ತುಂಬಿ ಮುಚ್ಚಲಾಗಿದೆ.

ABOUT THE AUTHOR

...view details