ತುಮಕೂರು: ಲಾಕ್ಡೌನ್ ಅಗತ್ಯವಿರುವ ವೈದ್ಯರು ಸೇರಿದಂತೆ ಕೆಲವು ಆಯ್ದ ವಾಹನಗಳಿಗೆ ಮಾತ್ರ ಪಾಸ್ ವಿತರಿಸಲಾಗಿತ್ತು. ಇನ್ನು ತುಮಕೂರಲ್ಲಿ ಈ ಪಾಸ್ಗಳು ದುರ್ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಇಂದು ವ್ಯಕ್ತಿಯೊಬ್ಬರ ವಾಹನದ ಪಾಸ್ ಪರಿಶೀಲಿಸಿದಾಗ ಗುಬ್ಬಿ ಶಾಸಕರ ಹೆಸರಲ್ಲಿ ಪಾಸ್ ಬಳಸಿರುವುದು ಪತ್ತೆಯಾಗಿದೆ.
ತುಮಕೂರಲ್ಲಿ ಜಿಲ್ಲಾಡಳಿತ ನೀಡಿದ ವಾಹನದ ಪಾಸ್ ದುರ್ಬಳಕೆ - tumkuru corona case
ತುಮಕೂರಲ್ಲಿ ಈ ಪಾಸ್ಗಳು ದುರ್ಬಳಕೆಯಾಗುತ್ತಿವೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಇಂದು ವ್ಯಕ್ತಿಯೊಬ್ಬರ ವಾಹನದ ಪಾಸ್ ಪರಿಶೀಲಿಸಿದಾಗ ಗುಬ್ಬಿ ಶಾಸಕರ ಹೆಸರಲ್ಲಿ ಪಾಸ್ ಬಳಸಿರುವುದು ಪತ್ತೆಯಾಗಿದೆ. ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಶಾಸಕ ಹುದ್ದೆಯನ್ನು ರಮೇಶ್ ಎಂಬುವರು ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ತುಮಕೂರಲ್ಲಿ ಜಿಲ್ಲಾಡಳಿತ ನೀಡಿದ ವಾಹನದ ಪಾಸ್ ದುರ್ಬಳಕೆ
ಎನ್.ರಮೇಶ್ ಎಂಬುವರ ಹೆಸರಿನಲ್ಲಿ, ಪದ ನಾಮ- ಶಾಸಕರು ಗುಬ್ಬಿ, ಕಚೇರಿ- ಗುಬ್ಬಿ ಎಂದು ಗುರುತಿನ ಪತ್ರದಲ್ಲಿ ನಮೂದಾಗಿದೆ. ಆದರೆ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಅವರ ಶಾಸಕ ಹುದ್ದೆಯನ್ನು ರಮೇಶ್ ಎಂಬುವರು ಬಳಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಪರಿಶೀಲನೆ ನಡೆಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ.