ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಬೆಳಗಿನಿಂದಲೂ ದೇವರ ದರ್ಶನ ಪಡೆಯಲು ಭಕ್ತಾಧಿಗಳು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.
ತುಮಕೂರಿನ ವಿವಿಧ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಆಚರಣೆ..
ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ನಗರದ ಬಿ ಹೆಚ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷವಾದ ಅಲಂಕಾರವನ್ನು ಮಾಡಲಾಗಿದೆ.
ನಗರದ ಬಿ.ಹೆಚ್ ರಸ್ತೆಯಲ್ಲಿರುವ ಮಹಾಲಕ್ಷ್ಮಿ ದೇವಾಲಯದಲ್ಲಿ ವಿಶೇಷವಾದ ಅಲಂಕಾರವನ್ನು ಮಾಡುವ ಮೂಲಕ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ, ಭಕ್ತಿಯಿಂದ ಆಚರಣೆ ಮಾಡಲಾಯಿತು. ಅದೇ ರೀತಿ ನಗರದ ಬಟವಾಡಿಯಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷವಾದ ಪೂಜೆ-ಪುನಸ್ಕಾರಗಳು ನಡೆದವು.
ಶ್ರಾವಣ ಮಾಸವನ್ನು ಹಬ್ಬಗಳ ಮಾಸ ಎಂದರೆ ತಪ್ಪಾಗಲಾರದು. ಯಾಕೆಂದರೆ, ಅಲ್ಲಿಂದ ಪ್ರಾರಂಭವಾಗುವ ಹಬ್ಬಗಳು ಕುಟುಂಬ ಸಮೇತ ನಾನಾ ವಿಧದಲ್ಲಿ ದೇವತಾ ಆರಾಧನೆಯನ್ನು ಮಾಡಲು ಅನುವು ಮಾಡಿಕೊಡುತ್ತವೆ. ಶ್ರಾವಣಮಾಸದಲ್ಲಿ ನಾಗರಪಂಚಮಿಯ ನಂತರ ಬರುವ ಪ್ರಮುಖವಾದ ಹಬ್ಬವೇ ಈ ವರಮಹಾಲಕ್ಷ್ಮಿ ಹಬ್ಬ. ಈ ವರಮಹಾಲಕ್ಷ್ಮಿ ಹಬ್ಬವನ್ನು ಮುತ್ತೈದೆಯರು ಆಚರಿಸುವ ವಿಶೇಷ ವೃತವಾಗಿದೆ. ಧನ ಸಂಪತ್ತಿನ ಒಡತಿಯ ಆರಾಧನೆ ಅಷ್ಟೇ ಅಲ್ಲ, ವಿದ್ಯೆ-ಬುದ್ಧಿ, ಧಾನ್ಯ ಸೇರಿ ಎಲ್ಲವನ್ನು ಆಹ್ವಾನಿಸುವುದು ಈ ವ್ರತದ ಮಹತ್ವವಾಗಿದೆ.