ತುಮಕೂರು:ಒಂದು ಮತ್ತು ಎರಡನೇ ಹಂತದ ವ್ಯಾಕ್ಸಿನ್ ನೀಡಿಕೆ ಪ್ರಮಾಣದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದ್ದಾರೆ.
'1ಮತ್ತು 2ನೇ ಹಂತದ ವ್ಯಾಕ್ಸಿನ್ ನೀಡಿಕೆಯಲ್ಲಿ ತುಮಕೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ' - ಕೊರೊನಾ ಲಸಿಕೆ
ಒಂದು ಮತ್ತು ಎರಡನೇ ಹಂತದ ವ್ಯಾಕ್ಸಿನ್ ನೀಡಿಕೆ ಪ್ರಮಾಣದಲ್ಲಿ ತುಮಕೂರು ಜಿಲ್ಲೆ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಧುಸ್ವಾಮಿ ತಿಳಿಸಿದ್ದು, ಮೂರನೇ ಹಂತದಲ್ಲಿ ನೀಡಲಾಗುತ್ತಿರುವ ವ್ಯಾಕ್ಸಿನನ್ನು 60 ವರ್ಷ ಮೇಲ್ಪಟ್ಟವರು ಯಾವುದೇ ಆತಂಕವಿಲ್ಲದೆ ಪಡೆಯಬಹುದು ಎಂದರು.
madhuswamy
ಚಿಕ್ಕನಾಯಕನಹಳ್ಳಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಪಡೆದು, ನಂತರ ಹೇಳಿಕೆ ನೀಡಿದ ಸಚಿವರು, ಈಗಾಗಲೇ ಕೇಂದ್ರ ಸರ್ಕಾರದ ತಂಡವೊಂದು ಜಿಲ್ಲೆಗೆ ಬಂದು ವ್ಯಾಕ್ಸಿನ್ ನೀಡಿಕೆಯಲ್ಲಿ ಪ್ರಗತಿಯನ್ನು ಪರಿಶೀಲನೆ ನಡೆಸಿ ವರದಿ ಪಡೆದಿದೆ ಎಂದು ತಿಳಿಸಿದರು.
ಮೂರನೇ ಹಂತದಲ್ಲಿ ನೀಡಲಾಗುತ್ತಿರುವ ವ್ಯಾಕ್ಸಿನನ್ನು 60 ವರ್ಷ ಮೇಲ್ಪಟ್ಟವರು ಯಾವುದೇ ಆತಂಕವಿಲ್ಲದೆ ಪಡೆಯಬಹುದಾಗಿದೆ. ಅನವಶ್ಯಕವಾಗಿ ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.