ತುಮಕೂರು: ಒಂಬತ್ತು ಬೆಡ್ಗಳ ಐಸಿಯು ಐಸೊಲೇಷನ್ ವಿಶೇಷ ವಾರ್ಡ್ನ ಮಾದರಿಯನ್ನು ಇಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅನಾವರಣಗೊಳಿಸಿದರು.
ವರ್ಟೆಕ್ಸ್ ಕನ್ಸಲ್ಟಿಂಗ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಶ್ರೇಯಸ್ ಎನರ್ಜಿ ಆ್ಯಂಡ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಂಯುಕ್ತಾಶ್ರಯದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. 30x40 ವಿಸ್ತೀರ್ಣದ ಖಾಲಿ ಜಾಗದಲ್ಲಿ ಈ ವಾರ್ಡ್ ಅನ್ನು 3 ದಿನದಲ್ಲಿ ನಿರ್ಮಿಸಬಹುದಾಗಿದೆ. ವಿಶೇಷ ಐಸಿಯುನಲ್ಲಿ ಒಬ್ಬ ಸೋಂಕಿತನಿಗೆ ದಿನಕ್ಕೆ ಕನಿಷ್ಠ 8 ಸಾವಿರ ರೂ. ಖರ್ಚು ಆಗಲಿದೆ. ಇದಕ್ಕೆ ಖಾಸಗಿ ಆಸ್ಪತ್ರೆಯಲ್ಲಿ 25 ಸಾವಿರ ರೂ.ಬಿಲ್ ಮಾಡಲಾಗುತ್ತಿದೆ. ಈ ಮಾದರಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.