ಕರ್ನಾಟಕ

karnataka

ETV Bharat / state

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಂಗಳಮುಖಿ..!

ತುಮಕೂರು ನಗರದ ಡಿಎಆರ್ ಮೈದಾನದಲ್ಲಿ ನವೆಂಬರ್21ರಿಂದ ಮೂರು ದಿನಗಳ ಕಾಲ ನಡೆಯಲಿರುವ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಸಾಲಿಗ್ರಾಮ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮಂಗಳಮುಖಿ ದೇವಿಕಾ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು.

transgender inaugurated Police annual sports event
ಮಂಗಳಮುಖಿ ದೇವಿಕ

By

Published : Nov 21, 2022, 3:33 PM IST

Updated : Nov 21, 2022, 8:28 PM IST

ತುಮಕೂರು:ನಗರದ ಡಿಎಆರ್. ಮೈದಾನದಲ್ಲಿ ನವೆಂಬರ್21ರಿಂದ ಮೂರು ದಿನಗಳ ಕಾಲ ನಡೆಯಲಿರುವ ತುಮಕೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟವನ್ನು ಮಂಗಳಮುಖಿಯೊಬ್ಬರಿಂದ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಲಾಯಿತು .

ಮೈಸೂರು ಜಿಲ್ಲೆ ಸಾಲಿಗ್ರಾಮ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಮಂಗಳಮುಖಿ ದೇವಿಕ ಅವರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡುವ ಅವಕಾಶ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ನಿರ್ಧಾರಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮೂಲಕ ಜಿಲ್ಲಾ ಪೊಲೀಸ್ ಇಲಾಖೆಯು ಒಂದು ಹೊಸ ಆಲೋಚನೆಯನ್ನು ಹುಟ್ಟು ಹಾಕಿದ್ದು, ಈ ಕಾರ್ಯ ಮಾಡಿದ್ದಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯನ್ನು ಉನ್ನತಾಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.

ಕ್ರೀಡಾಪಟುಗಳಿಂದ ಕ್ರೀಡಾ ಜ್ಯೋತಿ ಸ್ವೀಕರಿಸಿ ಮಾತನಾಡಿದ ದೇವಿಕ ಅವರು, ಶಿಕ್ಷಣದ ಅರ್ಹತೆ ಹೊಂದಿರುವ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆ ಸೇರಿದಂತೆ ಇತರ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗಾವಕಾಶ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಮಂಗಳಮುಖಿ

ಮಂಗಳಮುಖಿಯರಲ್ಲಿ ಓದಿದವರೂ ಇದ್ದಾರೆ. ಅಂತಹವರಿಗೆ ಸರ್ಕಾರಿ ಉದ್ಯೋಗ ನೀಡಿದರೆ ಬದುಕು ಕಟ್ಟಿಕೊಳ್ಳಲು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮಂಗಳಮುಖಿಯರಿಗೆ ಪೊಲೀಸ್ ಇಲಾಖೆಯಲ್ಲಿ ಹೆಚ್ಚು ಉದ್ಯೋಗ ನೀಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳಮುಖಿಯರಿಗೆ ನಿವೇಶನ ನೀಡಿ:ಮಂಗಳಮುಖಿಯರು ಇರಲು ಸೂಕ್ತ ಸೂರು ಇಲ್ಲದೇ ಬದುಕು ದೂಡುವಂತಾಗಿದೆ. ಸರ್ಕಾರ ಮಂಗಳಮುಖಿಯರಿಗೆ ನಿವೇಶನ ನೀಡಿ ಮನೆ ನಿರ್ಮಿಸಿಕೊಡುವ ಮೂಲಕ ಇತರರಂತೆ ಸಮಾಜದಲ್ಲಿ ಬದುಕು ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

ಮಂಗಳಮುಖಿಯರು ಎಲ್ಲೇ ಇರಲಿ, ಹೇಗೆ ಇರಲಿ ಪೊಲೀಸ್ ಅಧಿಕಾರಿಗಳು ತುಂಬಾ ಸಹಾಯ ಮಾಡುತ್ತಾರೆ. ನಮಗೆ ಸದಾ ಪೊಲೀಸರ ಸಹಕಾರ ಅತ್ಯವಶ್ಯಕವಾಗಿದೆ. ಮಂಗಳಮುಖಿಯರು ಸಾಧನೆ ಮಾಡಲು ಕುಟುಂಬದವರೇ ಸಹಕರಿಸುವುದಿಲ್ಲ. ಎಷ್ಟೋ ತಂದೆ- ತಾಯಿ, ಅಣ್ಣ ತಮ್ಮಂದಿರುವ ಮಂಗಳಮುಖಿಯರು ಎಂದಾಕ್ಷಣ ಮನೆಯಿಂದ ಹೊರಗೆ ಹಾಕುತ್ತಾರೆ. ನಾವು ಭಿಕ್ಷಾಟನೆ ಮಾಡುತ್ತಾ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ ಎಂದರು.

ಜನಸಾಮಾನ್ಯರು ನೀಡುವ ಕಾಣಿಕೆ ಹಣದಲ್ಲಿ ಮಂಗಳಮುಖಿಯರು ಅನಾಥ ಮಕ್ಕಳನ್ನು ಸಾಕುತ್ತಿದ್ದಾರೆ. ಜತೆಗೆ ಬಡವರಿಗೂ ದಾನ ಮಾಡಲಾಗುತ್ತಿದೆ ಎಂದು ಮಂಗಳಮುಖಿ ದೇವಿಕಾ ಹೇಳಿದರು.

ಇದನ್ನೂ ಓದಿ:ಓಲಾ, ಉಬರ್ ಆಟೋ ಸೇವೆ ಬಗ್ಗೆ ನ. 25ರೊಳಗೆ ನಿರ್ಧಾರ: ಹೈಕೋರ್ಟ್​ಗೆ ಸರ್ಕಾರದ ಮಾಹಿತಿ

Last Updated : Nov 21, 2022, 8:28 PM IST

ABOUT THE AUTHOR

...view details