ತುಮಕೂರು:ನನಗೂ ಮಾನ, ಮರ್ಯಾದೆ, ಗೌರವ ಎಲ್ಲ ಇದೆ. ಅದನ್ನು ಬಿಟ್ಟು ನಾನು ಸರ್ಕಾರಿ ಕೆಲಸಕ್ಕೆ ಬಂದಿಲ್ಲ. ನನಗೆ ಮಾತನಾಡಲು ಅವಕಾಶ ನೀಡಿ, ಎಲ್ಲವನ್ನೂ ನೀವೇ ಮಾತನಾಡಿದರೆ ಏನು ಅರ್ಥಎಂದು ಮಹಾನಗರ ಪಾಲಿಕೆಯ ಆಯುಕ್ತ ಭೂಬಾಲನ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ಪಾಲಿಕೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸದಸ್ಯರಿಗೆ ತಿಳಿಯದಂತೆ ಪೌರಕಾರ್ಮಿಕರನ್ನು ಒಂದು ವಾರ್ಡ್ನಿಂದ ಮತ್ತೊಂದು ವಾರ್ಡಿಗೆ ಕಾರ್ಯನಿರ್ವಹಿಸಲು ಸ್ಥಳಾಂತರಿಸಲಾಗಿತ್ತು. ಇದನ್ನು ಖಂಡಿಸಿಪಾಲಿಕೆಯ ಆಯುಕ್ತರ ಮೇಲೆ ವಾರ್ಡ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ವಾರ್ಡ್ ಸದಸ್ಯರು ನಮಗೇನು ಗೌರವ ಇಲ್ಲವೇ ?ನಮ್ಮ ವಾರ್ಡ್ನಲ್ಲಿಏನು ನಡೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ.
ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಹೀಗಿರುವಾಗ, ಜನಪ್ರತಿನಿಧಿಗಳಾಗಿ ನಾವು ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ಸಭೆಯಲ್ಲಿ ಕೆಲಕಾಲ ಸದಸ್ಯರು ಗೊಂದಲ ಸೃಷ್ಟಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು,ವಾರ್ಡ್ ಸದಸ್ಯರೇ ಕೆಲ ಪೌರಕಾರ್ಮಿಕರು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದುಪತ್ರದ ಮೂಲಕನನಗೆ ತಿಳಿಸಿದ್ದರು. ಹಾಗಾಗಿ ಪೌರಕಾರ್ಮಿಕರನ್ನು ಒಂದು ವಾರ್ಡ್ನಿಂದ ಮತ್ತೊಂದು ವಾರ್ಡಿಗೆ ಕಾರ್ಯನಿರ್ವಹಿಸಲು ವರ್ಗಾಯಿಸಲಾಗಿದೆ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಾರ್ಡ್ ಸದಸ್ಯರು ನಾವು ಕೇಳುವವರನ್ನು ನಮ್ಮ ವಾರ್ಡಿಗೆ ವರ್ಗಾಹಿಸಿ ಆದೇಶಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಒಪ್ಪಿದ ಆಯುಕ್ತರು ನಮಗೆ ಪತ್ರದ ಮೂಲಕ ಯಾವ ವಾರ್ಡಗೆ ಯಾವ ಪೌರಕಾರ್ಮಿಕರು ಬೇಕು ಎಂದು ಬರೆದು ನೀಡಿ, ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.