ತುಮಕೂರು :ಜಿಲ್ಲೆಯಲ್ಲಿ ಕಟ್ಟಡ ನಿರ್ಮಾಣಗಳಾಗ್ತಿಲ್ಲ. ಅದರಲ್ಲೂ ಮನೆಗಳ ನಿರ್ಮಾಣ ಕಾಮಗಾರಿಗಳು ಬಹುಪಾಲು ಸ್ಥಗಿತಗೊಂಡಿವೆ. ಲಾಕ್ಡೌನ್ಗೂ ಮುನ್ನ ಆರಂಭವಾಗಿದ್ದ ಮನೆಗಳ ನಿರ್ಮಾಣ ಕಾಮಗಾರಿ ಮುಂದುವರಿದಿದೆ. ಅತಿ ಕಡಿಮೆ ಸಂಖ್ಯೆಯ ಕಾರ್ಮಿಕರ ಅಲಭ್ಯತೆ ನಡುವೆಯೂ ಮನೆಗಳ ನಿರ್ಮಾಣ ಪೂರ್ಣಗೊಳಿಸುವ ಧಾವಂತದಲ್ಲಿ ಮಾಲೀಕರಿದ್ದಾರೆ.
ಆದರೆ, ಹೊಸದಾಗಿ ಮನೆ ನಿರ್ಮಾಣಕ್ಕೆ ಸಾರ್ವಜನಿಕರು ಮುಂದಾಗ್ತಿಲ್ಲ. ಅಲ್ಲದೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಪರವಾನಿಗೆ ಪಡೆಯಲು ಕೂಡ ಸಾರ್ವಜನಿಕರು ಆಸಕ್ತಿ ವಹಿಸದಿರುವುದು ಗಮನಾರ್ಹ ಅಂಶ. ಬಹುತೇಕ ಕಾರ್ಮಿಕರು ಈಗಾಗಲೇ ಲಾಕ್‌ಡೌನ್ ಸಡಿಲಿಕೆ ನಂತರ ತಮ್ಮ ಊರುಗಳಿಗೆ ಹೊರಟು ಹೋಗಿದ್ದಾರೆ.