ತುಮಕೂರು: ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ್ರೆ ಪ್ರೊ ಕಬ್ಬಡಿ ರೀತಿ ಪೊಲೀಸ್ ಕಬ್ಬಡಿ ಆಡಬೇಕಾಗತ್ತೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಂಶಿ ಕೃಷ್ಣ ಅವರು ರೌಡಿಶೀಟರ್ಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾಲ ಬಿಚ್ಚಿದ್ರೆ ಗಡೀಪಾರು: ರೌಡಿಶೀಟರ್ಗಳಿಗೆ ತುಮಕೂರು ಎಸ್ಪಿ ವಾರ್ನಿಂಗ್ - ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ
ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸುಮಾರು 249 ರೌಡಿ ಶೀಟರ್ಗಳನ್ನು ಕರೆಸಿದ್ದು, ಅವರ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ವಂಶಿ ಕೃಷ್ಣ ಅವರು ಪಡೆದರು.
ಇಂದು ಬೆಳ್ಳಂ ಬೆಳಗ್ಗೆ ನಗರದ ಚಿಲುಮೆ ಕಲ್ಯಾಣ ಮಂಟಪದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ವಿವಿಧ ಪೊಲೀಸ್ ಠಾಣೆಗಳಲ್ಲಿನ ಸುಮಾರು 249 ರೌಡಿ ಶೀಟರ್ಗಳನ್ನು ಕರೆಸಿದ್ದು, ಅವರ ಪೂರ್ವಪರ ಮತ್ತು ಪ್ರಸ್ತುತ ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತಾದ ಮಾಹಿತಿ ಪಡೆದರು. ಮುಂದಿನ ದಿನಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡು ಬಂದ್ರೆ ಗಡಿಪಾರುವ ಮಾಡುವುದಾಗಿ ಎಚ್ಚರಿಸಿದರು ಮುಂದೆ ಏನಾದ್ರೂ ಬಾಲ ಬಿಚ್ಚಿದ್ರೆ ಕಟ್ ಮಾಡೋದಾಗಿ ಎಚ್ಚರಿಸಿದ್ರು.
ನಗರದ ಶೆಟ್ಟಿಹಳ್ಳಿ ಸೇತುವೆ ಬಳಿ ರಾತ್ರಿ ವೇಳೆ ವಾಹನಗಳ ತಪಾಸಣೆ ಮಾಡುತ್ತಿದ್ದ ಜಯನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ಮೇಲೆ ವಾಹನ ಹತ್ತಿಸಲು ದುಷ್ಕರ್ಮಿಗಳು ಯತ್ನಿಸಿದ್ದರು. ಇದರಿಂದ ನವೀನ್ ಗಂಭೀರವಾಗಿ ಗಾಯಗೊಂಡಿದ್ದರು. ರೌಡಿಶೀಟರ್ಗಳ ಪುಂಡಾಟಿಕೆ ಆರಂಭವಾಗಿತ್ತು. ಇದನ್ನು ಮನಗಂಡ ಎಸ್ಪಿ ರೌಡಿ ಶೀಟರ್ಗಳಿಗೆ ವಾರ್ನಿಂಗ್ ನೀಡಿದ್ದು ಗಮನಾರ್ಹವಾಗಿತ್ತು. ನಾಲ್ವರು ಡಿವೈಎಸ್ಪಿಗಳು, ಎಲ್ಲಾ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಮತ್ತು ಇನ್ಸ್ ಪೆಕ್ಟರ್ಗಳು ಇದೇ ವೇಳೆ ಹಾಜರಿದ್ದು, ರೌಡಿಶೀಟರ್ಗಳ ಬಗ್ಗೆ ಎಸ್ಪಿ ವಂಶಿ ಕೃಷ್ಣಗೆ ಮಾಹಿತಿ ನೀಡಿದರು.