ತುಮಕೂರು: ನಗರದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಪೊಲೀಸ್ ಕ್ವಾಟ್ರಸ್ನಲ್ಲಿ ಅಳವಡಿಸಲಾಗಿದ್ದ ಸೋಲಾರ್ ಸಿಸ್ಟಮ್ ಬಿಡಿ ಭಾಗಗಳು ಹಾರಿ ಹೋಗಿ ಅಪಾರ ನಷ್ಟ ಸಂಭವಿಸಿದೆ.
ಮಳೆರಾಯನ ಆರ್ಭಟಕ್ಕೆ ಸೋಲಾರ್ ಸಿಸ್ಟಮ್ ನಜ್ಜುಗುಜ್ಜು: ಅಪಾರ ನಷ್ಟ - heavy rain
ನಗರದಲ್ಲಿ ಭಾರಿ ಮಳೆ ಸುರಿದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ, ಜನ ಜೀವನ ಅಸ್ತವ್ಯಸ್ತ
ನಗರದಲ್ಲಿ ಮಳೆ ಅವಾಂತರ
ಜಯನಗರ ಬಡಾವಣೆಯಲ್ಲಿರುವ ಪೊಲೀಸ್ ಕ್ವಾಟ್ರಸ್ನಲ್ಲಿ ಘಟನೆ ಸಂಭವಿಸಿದ್ದು, ಮನೆಗಳ ಮೇಲ್ಭಾಗ ಇದ್ದ 11 ಸೋಲಾರ್ ಪ್ಲೆಟ್ಗಳು ಬಿಲ್ಡಿಂಗ್ ಮೇಲಿಂದ ಬಿದ್ದು ನಜ್ಜುಗುಜ್ಜಾಗಿವೆ.
ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಭಾರಿ ಮಳೆಗೆ ನಗರದ ವಿವಿಧೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿತ್ತು.