ಕರ್ನಾಟಕ

karnataka

ETV Bharat / state

ಶಿರಾದಲ್ಲಿ ತ್ರಿಕೋನ ಸ್ಪರ್ಧೆ ಇರುವುದು ಸತ್ಯ.. ಆದ್ರೂ ಕಾಂಗ್ರೆಸ್‌ ಗೆಲ್ಲಲಿದೆ- ವಿಪಕ್ಷ ನಾಯಕ ಸಿದ್ದರಾಮಯ್ಯ - ಸಿದ್ದರಾಮಯ್ಯ ಲೇಟೆಸ್ಟ್​ ತುಮಕೂರು ಭೇಟಿ

ಸತ್ಯವನ್ನು ಒಪ್ಪಿಕೊಳ್ಳಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ಬಂದಿದೆ, ಹಾಗಾಗಿ ನಡೆಯುತ್ತೆ. ಆದರೆ, ಈ ಬಾರಿ ಟಿ ಬಿ ಜಯಚಂದ್ರ ಗೆಲ್ಲುತ್ತಾರೆ ಎಂದು ಹೇಳಿದರು. ಎಲ್ಲಾ ಮುಖಂಡರು ಶಿರಾದಲ್ಲಿದ್ದು ಕೆಲಸ ಮಾಡುತ್ತೇವೆ..

siddaramaiah reaction about sira by election
ಸಿದ್ದರಾಮಯ್ಯ ಹೇಳಿಕೆ

By

Published : Oct 7, 2020, 6:02 PM IST

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಡೆಯುವುದು ಸತ್ಯ. ಇಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲುವು ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶಿರಾ ಬೈ ಎಲೆಕ್ಷನ್ ಕುರಿತಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ

ತುಮಕೂರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದ ಸಂದರ್ಭದಲ್ಲಿ ಮಾತನಾಡಿದ ಅವರು, ತುಮಕೂರು ಕಾಂಗ್ರೆಸ್​ನಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶಿರಾ ಉಪ ಚುನಾವಣೆಯಲ್ಲಿ ಯಾವುದೇ ಒಳ ಏಟು, ಹೊರ ಏಟು ಇಲ್ಲ. ಶಿರಾದಲ್ಲಿ ಗೆಲ್ಲಲೇಬೇಕು ಎಂಬುದೇ ಒಂದೇ ಏಟು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ರು.

ಸತ್ಯವನ್ನು ಒಪ್ಪಿಕೊಳ್ಳಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬಲ ಬಂದಿದೆ, ಹಾಗಾಗಿ ನಡೆಯುತ್ತೆ. ಆದರೆ, ಈ ಬಾರಿ ಟಿ ಬಿ ಜಯಚಂದ್ರ ಗೆಲ್ಲುತ್ತಾರೆ ಎಂದು ಹೇಳಿದರು. ಎಲ್ಲಾ ಮುಖಂಡರು ಶಿರಾದಲ್ಲಿದ್ದು ಕೆಲಸ ಮಾಡುತ್ತೇವೆ, ನಾನು ಕೂಡ ನಾಲ್ಕು ದಿನ ತುಮಕೂರಿನಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ABOUT THE AUTHOR

...view details