ತುಮಕೂರು: ಅಮೂಲ್ಯ ಜೀವವೈವಿಧ್ಯದ ತಾಣವಾಗಿರುವ ಜಿಲ್ಲೆಯ ಸಿದ್ದರಬೆಟ್ಟ ಸಂರಕ್ಷಣೆಗೆ ಬದ್ಧವಾಗಿದ್ದು, 500 ಹೆಕ್ಟೇರ್ ಪ್ರದೇಶದಲ್ಲಿ ಟ್ರೆಂಚಿಂಗ್ ಮಾಡಿ ಸಂರಕ್ಷಣೆ ಮಾಡಲಾಗಿದೆ ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದ್ದಾರೆ.
ತುಮಕೂರಿನ ಸಿದ್ದರಬೆಟ್ಟ ಉಳಿಸಲು ಬದ್ಧ: ಅನಂತ ಹೆಗಡೆ ಆಶೀಸರ
ತುಮಕೂರು ಜಿಲ್ಲೆಯ ಅಮೂಲ್ಯ ಜೀವ ಸಂಪತ್ತುಗಳ ತಾಣವಾಗಿರುವ ಸಿದ್ದರ ಬೆಟ್ಟವನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದ್ದಾರೆ.
ತುಮಕೂರಿನ ಸಿದ್ದರಬೆಟ್ಟ ಉಳಿಸಲು ಬದ್ಧ ಎಂದ ಅನಂತ ಹೆಗಡೆ ಆಶೀಸರ
ಸಿದ್ದರಬೆಟ್ಟದಲ್ಲಿರುವ ಅಮೂಲ್ಯ ಸಸ್ಯ ಸಂಪತ್ತನ್ನು ಸಂರಕ್ಷಿಸಲು ಇನ್ನೂ ಒಂದು ಸಾವಿರ ಹೆಕ್ಟೇರ್ ಪ್ರದೇಶವನ್ನು ಸಂರಕ್ಷಿತ ವಲಯವನ್ನಾಗಿ ಮಾಡಲಾಗುವುದು. ಜಿಲ್ಲೆಯಲ್ಲಿ ಕೆರೆಗಳ ಸಂರಕ್ಷಣೆ ಮಾಡಲು ಒತ್ತುವರಿ ತೆರವುಗೊಳಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿವೆ. ಔಷಧಿ ಸಸಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಪೂರಕವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಆದರೆ ನಿರೀಕ್ಷೆಗೆ ತಕ್ಕಂತೆ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಔಷಧಿ ಸಸಿಗಳ ವಿತರಣೆ ಒಂದು ರೀತಿ ವಾಣಿಜ್ಯೀಕರಣಗೊಂಡಿದೆ. ಎಲ್ಲೆಡೆ ಈ ಕೆಲಸವಾಗಿದೆ ಎಂದು ನಾನು ಹೇಳುವುದಿಲ್ಲ ಎಂದರು.