ತುಮಕೂರು:ಶಿರಾ ವಿಧಾನಸಭಾ ಉಪ ಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ರೈತರ ಸಾಲ ಮನ್ನಾ ಯೋಜನೆಯ ಫಲಾನುಭವಿಗಳು ಕುರಿಮರಿ ನೀಡಿ ಗಮನ ಸೆಳೆದಿದ್ದರು.
ಶಿರಾ ಉಪಕದನ: ವೋಟು ಕೇಳಲು ಹೋದ ಎಚ್ಡಿಕೆಗೆ ಒಂದು ಮೂಟೆ ರಾಗಿ ಗಿಫ್ಟ್ - Shira By-Election news
ಕೆಲ ರೈತ ಮಹಿಳೆಯರು ರಾಗಿ ತೆನೆಯನ್ನು ಕುಮಾರಸ್ವಾಮಿಗೆ ನೀಡಿ ಕೃತಜ್ಞತೆ ಮೆರೆದಿದ್ದಾರೆ.
ಶಿರಾ ಉಪಕದನ: ಎಚ್ಡಿಕೆ ಗೆ ರಾಗಿ ತೆನೆ ನೀಡಿದ ಮಹಿಳೆಯರು
ಇದೀಗ ಮತ್ತೊಮ್ಮೆ ಕೆಲ ರೈತ ಮಹಿಳೆಯರು ರಾಗಿ ತೆನೆಯನ್ನು ಕುಮಾರಸ್ವಾಮಿಗೆ ನೀಡಿ ಕೃತಜ್ಞತೆ ಮೆರೆದಿದ್ದಾರೆ. ಶಿರಾ ತಾಲೂಕಿನ ಬದಕುಂಟೆ ಗ್ರಾಮದಲ್ಲಿ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದ ಕುಮಾರಸ್ವಾಮಿಗೆ ರೈತ ಮಹಿಳೆಯರು ರಾಗಿ ತೆನೆ ನೀಡಿದರೆ, ರೈತರೊಬ್ಬರು ಒಂದು ಮೂಟೆ ರಾಗಿಯನ್ನು ನೀಡಿದಂತಹ ಅಪರೂಪದ ಪ್ರಸಂಗ ನಡೆದಿದೆ.