ತುಮಕೂರು :ಸಹಜವಾಗಿ ಕ್ರೀಡಾಕೂಟಗಳಲ್ಲಿ ಟ್ರೋಫಿ, ಹಣವನ್ನು ವಿಜೇತರಿಗೆ ಬಹುಮಾನವಾಗಿ ನೀಡಲಾಗುತ್ತದೆ. ಆದರೆ, ಜಿಲ್ಲೆಯಲ್ಲಿ ನಡೆದ ಕ್ರಿಕೆಟ್ ಟೂರ್ನಿಮೆಂಟ್ನಲ್ಲಿ ವಿಜೇತರಿಗೆ ಬಹುಮಾನವಾಗಿ ಎರಡು ಟಗರುಗಳನ್ನು ಇರಿಸಿದ್ದು ಬಹು ಚರ್ಚೆಗೆ ಗ್ರಾಸವಾಗಿದೆ.
ಶಿರಾ ತಾಲೂಕು ಚಿಕ್ಕಹುಲಿಕುಂಟೆ ಗ್ರಾಮದ ದೊಡ್ಡಕೆರೆ ಮೈದಾನದಲ್ಲಿ ಸ್ಥಳೀಯ ಗೆಳೆಯರ ಬಳಗದ ವತಿಯಿಂದ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, ಎರಡು ಟಗರುಗಳನ್ನು ಬಹುಮಾನವಾಗಿ ಇರಿಸಲಾಗಿತ್ತು. ನವೆಂಬರ್ 28-29ರಂದು ಎರಡು ದಿನಗಳ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿತ್ತು. ಆಂಧ್ರದ ಮೋರಬಾಗಿಲು ಗ್ರಾಮದಿಂದ ಒಂದು ತಂಡ, ಪಟ್ಟನಾಯಕನಹಳ್ಳಿ, ಬರಗೂರು, ಶಿರಾ ನಗರದಿಂದ ಎರಡು ತಂಡಗಳು ಸೇರಿದಂತೆ ಒಟು 23 ತಂಡ ಭಾಗವಹಿಸಿದ್ದವು.