ತುಮಕೂರು: ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ, ಸಚಿವ ಹೆಚ್ ಡಿ ರೇವಣ್ಣ ಅವರ ಕಾರ್ಯಕ್ರಮವೆಲ್ಲಾ ರಾವಣ ಎಂಬಂತೆ ಬಿಂಬಿತವಾಗಿವೆ. ರೇವಣ್ಣನಿಗೆ ರಾವಣ ಅಂತಾ ಅವರಪ್ಪ ಹೆಚ್ ಡಿ ದೇವೇಗೌಡರು ಹೆಸರು ಇಡಬೇಕಿತ್ತು. ಆದರೆ, ರೇವಣ್ಣ ಅಂತಾ ಇಟ್ಟಿದ್ದಾರೆ ಎಂದು ಟೀಕಿಸಿದರು.
ಸಚಿವ ಹೆಚ್ ಡಿ ರೇವಣ್ಣನಿಗೆ ರಾವಣ ಎಂದು ಹೆಸರಿಡಬೇಕಿತ್ತು.. ಕೈ ಮಾಜಿ ಶಾಸಕ ಕೆ ಎನ್ ರಾಜಣ್ಣ ವಾಗ್ದಾಳಿ..
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್‌ನ ಮಾಜಿ ಶಾಸಕ ಕೆ ಎನ್ ರಾಜಣ್ಣ, ಹೆಚ್ ಡಿ ರೇವಣ್ಣ ಅವರ ಕಾರ್ಯಕ್ರಮವೆಲ್ಲಾ ರಾವಣ ಎಂಬಂತೆ ಬಿಂಬಿತ. ರೇವಣ್ಣನಿಗೆ ರಾವಣ ಅಂತಾ ಅವರಪ್ಪ ಹೆಸರು ಇಡಬೇಕಿತ್ತು. ಆದರೆ, ರೇವಣ್ಣ ಅಂತಾ ಇಟ್ಟಿದ್ದಾರೆ ಎಂದು ಟೀಕಿಸಿದರು.
ರಾಜ್ಯದಲ್ಲಿ ಸರ್ಕಾರವೇ ಅಸ್ತಿತ್ವದಲ್ಲಿಲ್ಲ. ಸಚಿವ ರೇವಣ್ಣ ನೀಡುವ ಕಾಟದಿಂದ ಯಾರು ವಾಪಸ್ ಬರುವುದಿಲ್ಲ. ಅಷ್ಟರಮಟ್ಟಿಗೆ ಹಿಂಸೆ ಕೊಟ್ಟಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಕಾರ್ಯದ ಕುರಿತು ಪ್ರತಿಕ್ರಿಯಿಸಿದ ಅವರು, ಅತೃಪ್ತ ಶಾಸಕರಲ್ಲಿ ಒಬ್ಬರಾದ ಎಂಟಿಬಿ ನಾಗರಾಜ್ ವಾಪಸ್ ಆಗಲು ಒಪ್ಪಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು. ಎಂಟಿಬಿ ನಾಗರಾಜ್ ಯಾವ ಒಂದು ನಿರ್ಧಾರ ತೆಗೆದುಕೊಂಡಿದ್ದಾರೆಯೋ ಅದಕ್ಕೆ ಬದ್ಧರಾಗಿರುತ್ತಾರೆ ಎಂದರು.
ಚುನಾವಣೆಗೆ ಸ್ಪರ್ಧಿಸುವವರು ಗೆಲ್ಲುತ್ತೇವೆ ಎಂದು ನಿಲ್ಲುತ್ತಾರೆಯೇ ಹೊರತು ಸೋಲುತ್ತೇವೆ ಎಂದು ಯಾರಾದರೂ ನಿಲ್ಲುತ್ತಾರೆಯೇ ಎಂದು ಪ್ರಶ್ನಿಸಿದರು. ಇದೇ ವೇಳೆ ಬಿಜೆಪಿಯ ಮಾಜಿ ಸಚಿವ ಲಕ್ಷ್ಮಣ ಸವದಿ ಕೂಡ ರಾಜಣ್ಣ ಅವರ ಜತೆಗಿರೋದು ಅಚ್ಚರಿ ತರಿಸಿತು.