ಕರ್ನಾಟಕ

karnataka

ETV Bharat / state

ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದ ರಾಹುಲ್ ಗಾಂಧಿ

ತ್ರಿವಿಧ ದಾಸೋಹಿ ಶಿವಕುಮಾರ್ ಸ್ವಾಮಿಜಿಯವರ 115ನೇ ಜಯಂತ್ಯುತ್ಸವದ ಮುನ್ನ ದಿನವಾದ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲು ರಾಹುಲ್​ ಗಾಂಧಿ ರಾಜ್ಯಕ್ಕೆ ಆಗಮಿಸಿದ್ದಾರೆ. ಮಠಕ್ಕೆ ಹೋಗುವ ಮಾರ್ಗಮಧ್ಯೆ ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ಅವರಿಗೆ ಸ್ವಾಗತ ಕೋರಲು ವೇದಿಕೆ ಸಿದ್ಧ ಮಾಡಲಾಗಿತ್ತು. ಅಲ್ಲಿ ವೇದಿಕೆ ಏರಿದ ರಾಹುಲ್​ ಗಾಂಧಿ ರಾಜ್ಯದ ಜನತೆಗೆ ಯುಗಾಧಿ ಶುಭಾಶಯ ತಿಳಿಸಿದರು.

Rahul Gandhi wished Ugadi a greeting to the people of the state
ರಾಹುಲ್ ಗಾಂಧಿ

By

Published : Mar 31, 2022, 6:04 PM IST

Updated : Mar 31, 2022, 7:09 PM IST

ದೊಡ್ಡಬಳ್ಳಾಪುರ:ಸಿದ್ಧಗಂಗಾ ಮಠಕ್ಕೆ ಹೋಗುವ ದಾರಿ ಮಧ್ಯೆ ದೊಡ್ಡಬಳ್ಳಾಪುರದಲ್ಲಿ ವೇದಿಕೆ ಏರಿದ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ನಾಡಿನ ಜನತೆಗೆ ಯುಗಾದಿ ಶುಭಾಶಯ ಕೋರಿದರು. ತ್ರಿವಿಧ ದಾಸೋಹಿ ಶಿವಕುಮಾರ್ ಸ್ವಾಮೀಜಿಯವರ 115ನೇ ಜಯಂತ್ಯುತ್ಸವದ ಮುನ್ನದಿನವಾದ ಇಂದು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲು ಅವರು ರಾಜ್ಯಕ್ಕೆ ಆಗಮಿಸಿದ್ದಾರೆ. ಸಿದ್ಧಗಂಗಾ ಮಠಕ್ಕೆ ಹೋಗುವ ದಾರಿ ಮಧ್ಯೆ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿಯಲ್ಲಿ ರಾಹುಲ್ ಗಾಂಧಿ ಸ್ವಾಗತಕ್ಕೆ ವೇದಿಕೆ ಸಿದ್ಧಪಡಿಸಲಾಗಿತ್ತು. ದೇವನಹಳ್ಳಿಯಲ್ಲಿ ಕ್ಯಾಂಟರ್ ಏರಿದ ರಾಹುಲ್ ಗಾಂಧಿ ಕಾಂಗ್ರೆಸ್ ಕಾರ್ಯಕರ್ತರಿಗೆ ಕೈ ಬೀಸಿ ಶುಭಾಶಯ ಕೋರಿದರು.

ಯುಗಾದಿ ಶುಭಾಶಯ ಕೋರಿದ ರಾಹುಲ್ ಗಾಂಧಿ

ದೊಡ್ಡಬಳ್ಳಾಪುರದ ಪ್ರವಾಸಿ ಮಂದಿರದ ಮುಂಭಾಗದಲ್ಲಿ ರಾಹುಲ್ ಗಾಂಧಿಗೆ ಸ್ವಾಗತ ಕೋರಲು ವೇದಿಕೆ ಸಿದ್ಧ ಮಾಡಲಾಗಿತ್ತು. ರಾಹುಲ್ ಗಾಂಧಿಗೆ ಕ್ರೇನ್ ಮೂಲಕ ಬೃಹತ್ ಹೂವಿನ ಹಾರ ಹಾಕಿ ಸ್ವಾಗತ ಕೋರಲಾಯಿತು. ರಾಹುಲ್ ಗಾಂಧಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನ ಸಾಥ್ ನೀಡಿದರು.

ಇದನ್ನೂ ಓದಿ:ಕೆಐಎಎಲ್ ಗೆ ಆಗಮಿಸಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ವೇದಿಕೆ ಮೇಲೆ ಬಂದ ತಕ್ಷಣ ಕ್ರೇನ್ ಮೇಲೆ ಅಪಾಯಕಾರಿ ಸ್ಥಳದಲ್ಲಿ ಕುಳಿತು ಕಾಂಗ್ರೆಸ್​ ಕಾರ್ಯಕರ್ತರು ಮೇಲಿನಿಂದ ಹೂಮಳೆ ಸುರಿಯಲು ಪ್ರಾರಂಭಿಸಿದರು. ಇದನ್ನ ಕಂಡ ರಾಹುಲ್ ಗಾಂಧಿ ಕ್ರೇನ್​ನಿಂದ ಇಳಿಯುವಂತೆ ಸೂಚಿಸಿದರು. ಆದ್ರೂ ಕಾರ್ಯಕರ್ತರು ಹೂಮಳೆ ಸುರಿಯುವುದನ್ನ ಮುಂದುವರೆಸಿದರು.

Last Updated : Mar 31, 2022, 7:09 PM IST

For All Latest Updates

TAGGED:

ABOUT THE AUTHOR

...view details