ತುಮಕೂರು: ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯೊಂದು ರಸ್ತೆ ಪಕ್ಕದಲ್ಲಿ ಬಿದ್ದು ನೋವಿನಿಂದ ಚೀರಾಡುತ್ತಿದ್ದ ದೃಶ್ಯ ತುಮಕೂರು ಜಿಲ್ಲೆ ದೇವರಾಯನ ದುರ್ಗ ಕಾಡಿನ ವ್ಯಾಪ್ತಿಯ ಆಚಾರಗುಡ್ಲು ಬಳಿ ನಡೆದಿದೆ.
ತುಮಕೂರು: ಗಾಯಗೊಂಡು ರಸ್ತೆಬದಿ ನರಳುತ್ತಿದ್ದ ಚಿರತೆ ರಕ್ಷಣೆ - kannadanews
ಕಾಲಿಗೆ ತೀವ್ರ ಪೆಟ್ಟು ಬಿದ್ದು ರಸ್ತೆಬದಿ ನರಳುತ್ತಿದ್ದ ಚಿರತೆಯನ್ನು ರಕ್ಷಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ದೇವರಾಯನ ದುರ್ಗ ಕಾಡಿನ ಬಳಿಯಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡು ಚೀರಾಡುತ್ತಿದ್ದ ಚಿರತೆಯ ಶಬ್ಧ ಕೇಳಿ ದಾರಿಹೋಕರು ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಸುಮಾರು 5 ವರ್ಷ ವಯಸ್ಸಿನ ಚಿರತೆ ಕಾಲಿಗೆ ತೀವ್ರ ಪೆಟ್ಟು ಬಿದ್ದು ನೋವಿನಿಂದ ನರಳುತ್ತಿದ್ದ ವಿಷಯವನ್ನು ಕೂಡಲೇ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಚಿಕಿತ್ಸೆಗಾಗಿ ಕೊಂಡೊಯ್ದಿದ್ದಾರೆ. ಅರೆ ಪ್ರಜ್ಞಾವಸ್ಥೆಯಲ್ಲಿರುವ ಚಿರತೆ ಏಳಲು ಆಗುತ್ತಿಲ್ಲ, ಹೀಗಾಗಿ ಬೋನಿನಲ್ಲಿ ಹಾಕಿಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದು ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ತಿಳಿಸಿದ್ದಾರೆ.