ಕರ್ನಾಟಕ

karnataka

ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿ: 5 ಮಂದಿ ಸಾವು, 25ಕ್ಕೂ ಅಧಿಕ ಮಂದಿಗೆ ಗಾಯ

By

Published : Mar 19, 2022, 10:15 AM IST

Updated : Mar 19, 2022, 12:40 PM IST

ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿಯಾದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

private bus overturns near pavagada
ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿ

ತುಮಕೂರು:ಜಿಲ್ಲೆಯಪಾವಗಡ ತಾಲೂಕಿನ ಪಳವಳ್ಳಿ ಕಟ್ಟೆ ಬಳಿ ಖಾಸಗಿ ಬಸ್​ ಪಲ್ಟಿಯಾದ ಪರಿಣಾಮ 5 ಮಂದಿ ಸಾವನ್ನಪ್ಪಿದ್ದು, 25ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.

ಶನಿವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟವರನ್ನು ಅಮೂಲ್ಯ(18), ಅಜಿತ್ (16), ಶಹನವಾಜ್ (18), ಕಲ್ಯಾಣ್ (18), ಸೂಲನಾಯಕನಹಳ್ಳಿ ಅಜಿತ್ (17) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 25ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಪಾವಗಡದ ಬಳಿ ಖಾಸಗಿ ಬಸ್​ ಪಲ್ಟಿ

ವೈ.ಎನ್. ಹೊಸಕೋಟೆ ಗ್ರಾಮದಿಂದ ಪಾವಗಡ ಪಟ್ಟಣಕ್ಕೆ ತೆರಳುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಆಗಿದೆ. ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಮುಂದಿನ ಮೂರು ದಿನ ರಾಜ್ಯಾದ್ಯಂತ ಮಳೆ

Last Updated : Mar 19, 2022, 12:40 PM IST

ABOUT THE AUTHOR

...view details