ಕರ್ನಾಟಕ

karnataka

By

Published : Jun 20, 2020, 10:33 PM IST

ETV Bharat / state

ತುಮಕೂರು; ಕಳಪೆ ಕಾಮಗಾರಿಯಿಂದ ಕಳಚಿ ಬೀಳುತ್ತಿದೆ ಗಾಜಿನ ಮನೆ!

ತುಮಕೂರಿನ ಕೋಟೆ ಆಂಜನೇಯ ಸ್ವಾಮಿ ವಿಗ್ರಹದ ಮುಂದೆ ಗಾಜಿನ ಮನೆಯಿದ್ದು, ದೇವಸ್ಥಾನಕ್ಕೆ ಬರುವ ಭಕ್ತರನ್ನು ಗಾಜಿನ ಮನೆ ಆಕರ್ಷಿಸಲಿದೆ ಎಂದೇ ಭಾವಿಸಲಾಗಿತ್ತು, 2017ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ, ಸುಂದರವಾದ ಗಾಜಿನ ಮನೆಯನ್ನು ನಿರ್ಮಾಣ ಮಾಡಿತ್ತು, ನಿರ್ಮಾಣಗೊಂಡ ಕೆಲವೇ ವರ್ಷಗಳಲ್ಲಿ ಗಾಜಿನ ಮನೆಯ ಕಳಪೆ ಕಾಮಗಾರಿಯಿಂದ ಟೀಕೆಗೆ ಗುರಿಯಾಗುವಂತಾಗಿದೆ.

glass house
ಕಳಪೆ ಕಾಮಗಾರಿಯಿಂದ ಕಳಚಿ ಬೀಳುತ್ತಿದೆ ಗಾಜಿನ ಮನೆ

ತುಮಕೂರು :ಅಮಾನಿಕೆರೆಯಲ್ಲಿ ನಿರ್ಮಾಣಗೊಂಡಿರುವ ಗಾಜಿನ ಮನೆ ಜಿಲ್ಲೆಗೆ ಕಳಶಪ್ರಾಯ ಎಂಬ ಮಾತುಗಳು ಕೇಳಿಬಂದಿದ್ದವು, ಆದರೀಗ ಗಾಜಿನಮನೆಯ ಗ್ಲಾಸ್​​​ಗಳು ಕಳಚಿ ಬೀಳುತ್ತಿವೆ.

ಬೆಂಗಳೂರಿನ ಲಾಲ್​ಬಾಗ್​​ನಲ್ಲಿರುವ ಗ್ಲಾಸ್ ಹೌಸ್​ನ್ನು ನಮ್ಮ ತುಮಕೂರಿನ ಗಾಜಿನ ಮನೆ ಹಿಂದಿಕ್ಕಿದೆ. ಇದರ ಮುಂದೆ ಅದೇನೂ ಅಲ್ಲ ಎಂದು ರಾಜಕಾರಣಿಗಳು ಭಾಷಣ ಬಿಗಿದಿದ್ದರು. ಕೋಟೆ ಆಂಜನೇಯ ಸ್ವಾಮಿ ವಿಗ್ರಹದ ಮುಂದೆ ಗಾಜಿನ ಮನೆಯಿದ್ದು, ದೇವಸ್ಥಾನಕ್ಕೆ ಬರುವ ಭಕ್ತರನ್ನು ಗಾಜಿನ ಮನೆ ಆಕರ್ಷಿಸಲಿದೆ ಎಂದೇ ಭಾವಿಸಲಾಗಿತ್ತು.

ಕಳಪೆ ಕಾಮಗಾರಿಯಿಂದ ಕಳಚಿ ಬೀಳುತ್ತಿದೆ ಗಾಜಿನ ಮನೆ

2017 ರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ, ಸುಂದರವಾದ ಗಾಜಿನ ಮನೆಯನ್ನು ನಿರ್ಮಾಣ ಮಾಡಿತ್ತು. ನಿರ್ಮಾಣಗೊಂಡ ಕೆಲವೇ ವರ್ಷಗಳಲ್ಲಿ ಗಾಜಿನ ಮನೆ ಕಳಪೆ ಕಾಮಗಾರಿಯಿಂದ ಟೀಕೆಗೆ ಗುರಿಯಾಗುವಂತಾಗಿದೆ.

ಗಾಜಿನ ಮನೆಯ ಹಲವು ಕಡೆ ಗ್ಲಾಸ್ ಗಳು ಮಳೆ-ಗಾಳಿಗೆ ಎಗರಿ ಹೋಗಿವೆ. ಜೋರಾಗಿ ಮಳೆ ಬಂದರೆ ಇಡೀ ಗ್ಲಾಸ್ ಹೌಸ್ ಸೋರಿ ಒಳಗೆಲ್ಲ ನೀರು ನಿಲ್ಲಲಿದೆ. ಇಲ್ಲಿ ಗುಣಮಟ್ಟದ ಗ್ಲಾಸ್​​ಳನ್ನು ಅಳವಡಿಸಿಲ್ಲ, ತುಮಕೂರು ಸ್ಮಾರ್ಟ್ ಸಿಟಿ ಎಂಬ ಕೀರ್ತಿಗೆ ಪಾತ್ರವಾಗಿರುವ ನಗರವಾಗಿದೆ. ಹಾಗಾಗಿ ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತಕಡೆ ಗಮನಹರಿಸಿ, ಗಾಜಿನ ಮನೆಯಲ್ಲಿ ಬಿದ್ದು ಹೋಗಿರುವ ಸ್ಥಳಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ.

ABOUT THE AUTHOR

...view details