ಕರ್ನಾಟಕ

karnataka

ETV Bharat / state

ಸಾಹಿತಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ಕಾವ್ಯ ಗೌರವ ಕಾರ್ಯಕ್ರಮ - ಸಾಹಿತಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ಕಾವ್ಯ ಗೌರವ ಕಾರ್ಯಕ್ರಮ

ಬಂಡಾಯ ಸಾಹಿತಿ ಕೆ.ಬಿ.ಸಿದ್ದಯ್ಯ ಅವರ ನೆನಪಿನಲ್ಲಿ ತುಮಕೂರು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯಿತು.

tmk
ಸಾಹಿತಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ಕಾವ್ಯ ಗೌರವ ಕಾರ್ಯಕ್ರಮ ನಡೆಯಿತು.

By

Published : Dec 4, 2019, 11:25 PM IST

ತುಮಕೂರು:ತುಮಕೂರು ವಿಶ್ವವಿದ್ಯಾನಿಲಯದ ಕಾಲೇಜು ಕನ್ನಡ ಪ್ರಾಧ್ಯಾಪಕರ ಒಕ್ಕೂಟ, ಬಂಡಾಯ ಸಾಹಿತ್ಯ ಸಂಘಟನೆ ಸಹಯೋಗದಲ್ಲಿ ಸಾಹಿತಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ಕಾವ್ಯ ಗೌರವ ಕಾರ್ಯಕ್ರಮವನ್ನು ನಡೆಸಲಾಯಿತು.

ಸಾಹಿತಿ ಕೆ.ಬಿ.ಸಿದ್ದಯ್ಯ ನೆನಪಿನಲ್ಲಿ ಕಾವ್ಯ ಗೌರವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದಯ್ಯ ಅವರ ಪತ್ನಿ ಗಂಗಮ್ಮ, ಅನಂತಮೂರ್ತಿ, ಸಿದ್ದಲಿಂಗಯ್ಯ, ಮಹಾದೇವಯ್ಯ ಇವರೆಲ್ಲರ ಸಂಪರ್ಕ, ಪ್ರೇರಣೆಯಿಂದ ಸಿದ್ದಯ್ಯ ಅವರು ಸಾಹಿತಿಯಾಗಲು ಪ್ರೇರಣೆ ದೊರೆಯಿತು ಎಂಬುದು ನನ್ನ ಅಭಿಪ್ರಾಯ ಎಂದರು.

ಸಿದ್ದಯ್ಯ ರಚಿಸಿದಂತಹ ಕಾವ್ಯಗಳನ್ನು ಒಮ್ಮೊಮ್ಮೆ ನನಗೆ ಓದಲು ಹೇಳುತ್ತಿದ್ದರು, ನಿಮ್ಮ ಅಕ್ಷರಗಳು ನನಗೆ ಅರ್ಥವಾಗುತ್ತಿರಲಿಲ್ಲ ಎಂದು ಹೇಳಿದರೂ, ನಿನಗೆ ಹೇಗೆ ಬರುತ್ತದೆಯೋ, ಎಷ್ಟು ಅರ್ಥವಾಗುತ್ತದೆಯೋ ಅದನ್ನೇ ಓದು ಎಂದು ಹೇಳುತ್ತಿದ್ದರು, ಆನಂತರದಲ್ಲಿ ನಿನಗೆ ಕನ್ನಡವು ಸರಿಯಾಗಿ ಬರುವುದಿಲ್ಲ, ಇಂಗ್ಲಿಷ್ ಬರುವುದಿಲ್ಲ ಎಂದು ತಮಾಷೆ ಮಾಡುತ್ತಿದ್ದರು ಎಂದು ಅವರನ್ನು ನೆನೆಯುತ್ತಾ ಭಾವುಕರಾದರು. ಬುದ್ಧ ಪೂರ್ಣಿಮೆಯ ದಿನದಂದು ಎಲ್ಲಾ ಸ್ನೇಹಿತರನ್ನು ಕರೆದು ಅರ್ಥಪೂರ್ಣವಾಗಿ ಆಚರಣೆ ಮಾಡುತ್ತಿದ್ದರು. ಅವರಿಗೆ ಅಪಘಾತವಾದ ಸಂದರ್ಭದಲ್ಲೂ ಸಹ ಅವರ ಸ್ನೇಹ ಬಳಗ ಮಾತ್ರ ದೂರವಾಗಲಿಲ್ಲ ಎಂದು ನೆನೆದು ಅತ್ತರು.

ಪ್ರೊ. ಬರಗೂರು ರಾಮಚಂದ್ರಪ್ಪ ಮಾತನಾಡಿ, ಕೆ.ಬಿ ಸಿದ್ದಯ್ಯ ಅವರ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಯಿತು. ಕೆ.ಬಿ ಸಿದ್ದಯ್ಯನವರು ಇದೇ ಕಾಲೇಜಿನ ವಿದ್ಯಾರ್ಥಿಯಾಗಿದ್ದರು, ಆಗ ನಾನು ಅಧ್ಯಾಪಕನಾಗಿ ಪ್ರವೇಶಿಸಿದೆ. ಮೂರು ಸಾವಿರದ ಐನೂರು ವಿದ್ಯಾರ್ಥಿಗಳಲ್ಲಿ ಇವರು ಒಬ್ಬರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅವರು ನೆನಪಿನಲ್ಲಿ ಇದ್ದರು ಏಕೆಂದರೆ ಅವರ ಚುರುಕುತನ, ಪ್ರಶ್ನಿಸುವ ಧಾಟಿಯಿಂದಾಗಿ. ಬಂಡಾಯ ಸಾಹಿತ್ಯ ಸಂಘಟನೆ ಕಟ್ಟಿದ ಸಂದರ್ಭದಲ್ಲಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಯಾಗಿಯೂ ಕೆ.ಬಿ ಸಿದ್ದಯ್ಯ ಕಾರ್ಯನಿರ್ವಹಿಸಿದ್ದಾರೆ. ನನ್ನ ಮತ್ತು ಅವರ ಒಡನಾಟ ಒಂದು ಸಂಘಟನಾತ್ಮಕ ಸಂಬಂಧದಿಂದ ಶುರುವಾದದ್ದು, ಸಿದ್ದಯ್ಯ ಅವರ ಸಾಮಾಜಿಕ ನ್ಯಾಯ ಖಂಡಕಾವ್ಯಗಳಲ್ಲಿ ಕೆಂಡದಂತೆ ಹರಿಯುವ ನದಿಯಾಗಿದೆ ಎಂದು ಕೆ ಬಿ ಸಿದ್ದಯ್ಯ ಅವರ ಸಾಹಿತ್ಯದ ಬಗ್ಗೆ ಅಭಿಪ್ರಾಯಪಟ್ಟರು.

ABOUT THE AUTHOR

...view details