ತುಮಕೂರು: ನಿನ್ನೆ ರಾತ್ರಿ ಗಣಪತಿ ನಿಮಜ್ಜನ ಕಾರ್ಯವೇನೋ ಭರ್ಜರಿಯಾಗಿ ಜರುಗಿತು. ಆದ್ರೆ, ಪಟಾಕಿ ಸಿಡಿಸಿ ಗಣಪನ ಮೆರೆವಣಿಗೆ ಮಾಡಿದ ಹಿನ್ನೆಲೆ ರಸ್ತೆಯನ್ನು ಸ್ವತಃ ಸಂಸದರೇ ಸ್ವಚ್ಛ ಮಾಡಿ ಪ್ರಸಂಶೆಗೆ ಒಳಗಾಗಿದ್ದಾರೆ.
ಶಿರಾದಲ್ಲಿ ಮಧ್ಯರಾತ್ರಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸಿದ ಬಿಜೆಪಿ ಸಂಸದ! - ಗಣಪತಿ ನಿಮಜ್ಜನ
ಗಣೇಶ ಉತ್ಸವದ ನಂತರ ಮಧ್ಯೆ ರಾತ್ರಿ ಸ್ಥಳಕ್ಕೆ ಬಂದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ, ತಮ್ಮ ಬೆಂಬಲಿಗರೊಂದಿಗೆ ರಸ್ತೆ ಸ್ವಚ್ಛಗೊಳಿಸಿದ್ದಾರೆ.
ರಸ್ತೆ ಸ್ವಚ್ಛಗೊಳಿಸಿದ ಸಂಸದ...
ಶಿರಾ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಉತ್ಸವದ ನಂತರ ರಸ್ತೆಯುದ್ದಕ್ಕೂ ಭಕ್ತರಿಗೆ ಪ್ರಸಾದ ವಿತರಿಸಲಾಗಿತ್ತು. ಅಲ್ಲದೆ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಗಿತ್ತು. ಉತ್ಸವದ ನಂತರ ಮಧ್ಯರಾತ್ರಿ ಸ್ಥಳಕ್ಕೆ ಬಂದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿ, ತಮ್ಮ ಬೆಂಬಲಿಗರೊಂದಿಗೆ ರಸ್ತೆ ಸ್ವಚ್ಛಗೊಳಿಸಿದ್ದಾರೆ.
ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.