ತುಮಕೂರು: ಸಿದ್ದಗಂಗಾ ಮಠದಲ್ಲಿ 2020ರ ಜ. 21ಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯ ಮೊದಲ ಪುಣ್ಯ ಸ್ಮರಣೆ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರನ್ನು ಭಾಗವಹಿಸುವಂತೆ ಆಹ್ವಾನಿಸಲು ಮಠದಿಂದ ಸಿದ್ಧತೆ ನಡೆದಿದೆ.
ಸಿದ್ದಗಂಗಾ ಶ್ರೀ ಪುಣ್ಯ ಸ್ಮರಣೆಗೆ ಬರುವಂತೆ ಮೋದಿಗೆ ಆಹ್ವಾನ... ಪಿಎಂಒನಿಂದ ನೋ ರೆಸ್ಪಾನ್ಸ್ - ಪುಣ್ಯ ಸ್ಮರಣೆಗೆ ಪ್ರಧಾನಿ ಮೋದಿಗೆ ಆಹ್ವಾನ
ಶ್ರೀ ಶಿವಕುಮಾರ ಸ್ವಾಮೀಜಿ ಅವರ ಒಂದನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ಶ್ರೀ ಸಿದ್ದಗಂಗಾ ಮಠದಿಂದ ಪ್ರಯತ್ನ ನಡೆಯುತ್ತಿದೆ.
ಶ್ರೀ ಶಿವಕುಮಾರ ಸ್ವಾಮಿಜೀಯ ಪುಣ್ಯ ಸ್ಮರಣೆಗೆ ಪ್ರಧಾನಿ ಮೋದಿ ಅವರನ್ನು ಭಾಗವಹಿವಂತೆ ಸಿದ್ಧತೆ ನಡೆದಿದೆ. ಆದರೆ ಇದುವರೆಗೂ ಪ್ರಧಾನಿ ಕಚೇರಿಯಿಂದ ಯಾವುದೇ ರೀತಿಯ ಸ್ಪಷ್ಟತೆಯ ಮಾಹಿತಿ ಲಭ್ಯವಾಗಿಲ್ಲ ಎಂದು ಮಠದ ಮೂಲಗಳುತಿಳಿಸಿವೆ.
ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾಗಿ ಜನವರಿ 21ಕ್ಕೆ ಒಂದು ವರ್ಷವಾಗುವ ಹಿನ್ನೆಲೆ, ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮಠದಲ್ಲಿ ಮೂರು ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಮೊದಲ ದಿನದ ಕಾರ್ಯಕ್ರಮಲ್ಲಿ ಪ್ರಧಾನಿ ಮೋದಿ ಅವರಿಗೆ ಪಾಲ್ಗೊಳ್ಳುವಂತೆ ಆಹ್ವಾನಿಸಲು ಸಿದ್ಧತೆ ನಡೆದಿದೆ.
TAGGED:
ಶ್ರೀ ಸಿದ್ದಗಂಗಾ ಮಠ