ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ರೇಸ್​​ನಲ್ಲಿ ನಾನಿಲ್ಲ: ಸಚಿವ ಮಾಧುಸ್ವಾಮಿ - ತುಮಕೂರು

ಜೂನ್ 7ರ ಬಳಿಕ ಲಾಕ್‌ಡೌನ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಪಾಸಿಟಿವ್ ರೇಟ್ ಆಧರಿಸಿ ನಿರ್ಧಾರ‌ ಕೈಗೊಳ್ಳಲಾಗುವುದು. ಹೋಮ್ ಕ್ವಾರಂಟೈನ್ ಮಾಡಿದಕ್ಕೆ ಸಾವಿನ ಪ್ರಮಾಣ ಹೆಚ್ಚಾಗಿದೆ. ಮನೆಯಲ್ಲಿ ಇದ್ದವರು ಕೊರೊನಾ ಉಲ್ಬಣವಾದಾಗ ಆಸ್ಪತ್ರೆಗೆ ಬರುತ್ತಾರೆ..

Minister JC Madhuswamy
ಸಚಿವ ಜೆ.ಸಿ ಮಾಧುಸ್ವಾಮಿ

By

Published : May 28, 2021, 2:37 PM IST

ತುಮಕೂರು :ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಲು ಇಷ್ಟಪಡಲ್ಲ. ನಾನು ಆ ರೇಸ್​​ನಲ್ಲಿ ಇಲ್ಲ. ಯಡಿಯೂರಪ್ಪನವರ ನಾಯಕತ್ವದ ಬಗ್ಗೆ ಪ್ರಶ್ನೆ ಇಲ್ಲ.‌ ಎಲ್ಲರ ಕಾಲದಲ್ಲೂ ನಾಯಕತ್ವ ಬದಲಾವಣೆ ಚರ್ಚೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದ್ದಾರೆ.

ತಾನು ಈ ಆಟದಲ್ಲಿ ಇಲ್ಲ ಅಂತಾರೆ ಸಚಿವ ಜೆ.ಸಿ ಮಾಧುಸ್ವಾಮಿ..

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಡನ್​​ನಲ್ಲಿ ಜ್ಯೂರಿಗಳು 90 ವರ್ಷ ಮೇಲ್ಪಟ್ಟವರು ಇರುತ್ತಾರೆ ಎಂದರು. ತುಮಕೂರು ಆಸ್ಪತ್ರೆಯನ್ನು ಪೋಸ್ಟ್ ಗ್ರಾಜ್ಯೂಯೇಟ್ ಸೆಂಟರ್ ಮಾಡಬೇಕೆಂಬ ಒತ್ತಾಯವಿದೆ.

ಕೆಬಿ ಕ್ರಾಸ್​​ನಲ್ಲಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ ಮನವಿ ಮಾಡಲಾಗಿದೆ ಎಂದರು. ಹಕ್ಕಿಪಿಕ್ಕಿ ಜನರಿಗೆ ವ್ಯಾಕ್ಸಿನ್ ತೆಗೆದುಕೊಳ್ಳಬೇಡಿ ಅಂತ ಹೇಳಿಲ್ಲ.‌ ಅವರು ಸೆಂಟರ್​ಗೆ ಬರದಿದ್ದರೆ ಏನು ಮಾಡುವುದು ಎಂದರು.

ಜೂನ್ 7ರ ಬಳಿಕ ಲಾಕ್‌ಡೌನ್ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿ ಪಾಸಿಟಿವ್ ರೇಟ್ ಆಧರಿಸಿ ನಿರ್ಧಾರ‌ ಕೈಗೊಳ್ಳಲಾಗುವುದು. ಹೋಮ್ ಕ್ವಾರಂಟೈನ್ ಮಾಡಿದಕ್ಕೆ ಸಾವಿನ ಪ್ರಮಾಣ ಹೆಚ್ಚಾಗಿದೆ. ಮನೆಯಲ್ಲಿ ಇದ್ದವರು ಕೊರೊನಾ ಉಲ್ಬಣವಾದಾಗ ಆಸ್ಪತ್ರೆಗೆ ಬರುತ್ತಾರೆ.

ತುಮಕೂರು ಕೇಂದ್ರದಲ್ಲಿ 200 ಬೆಡ್​​ಗಳ ತಾಯಿ-ಮಗು ಕೋವಿಡ್​ ಆಸ್ಪತ್ರೆ ಆರಂಭಿಸಲು ಅನುಮತಿ ನೀಡಬೇಕೆಂದು ಇಂದು ನಡೆದ ಕೋವಿಡ್-19 ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿರುವುದಾಗಿ ಸಚಿವ ಮಾಧುಸ್ವಾಮಿ ತಿಳಿಸಿದರು.

ತುಮಕೂರಿನಲ್ಲಿ ಕಳೆದ ವರ್ಷವೇ ಕ್ಯಾನ್ಸರ್ ಆಸ್ಪತ್ರೆ ತೆರೆಯಲು ನಿರ್ಧರಿಸಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ಜಾರಿಗೆ ಬಂದಿಲ್ಲ. ಈ ಬಗ್ಗೆಯೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದು, ಮುಂದಿನ ಎರಡು ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲೆಯ ಎರಡು ಕಡೆ ಸಿಟಿ ಸ್ಕ್ಯಾನ್ ಸೆಂಟರ್ ತೆರೆಯಲು ಅನುಮತಿ ನೀಡಬೇಕೆಂದು ಮನವಿ ಮಾಡಿರುವೆ. ಕೋವಿಡ್ ವಿಭಾಗದಲ್ಲಿ ಮಕ್ಕಳ ತಜ್ಞರ ಕೊರತೆ ಇರುವುದರಿಂದ ಅದರ ಬಗ್ಗೆ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಲಾಗಿದೆ.

ಇನ್ನು, ಕೊರೊನಾ ಸೋಂಕು ಉಲ್ಬಣವಾದ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಚಿವರು ತಿಳಿಸಿದರು.

ABOUT THE AUTHOR

...view details