ಕರ್ನಾಟಕ

karnataka

ETV Bharat / state

ಚರ್ಮಗಂಟು ರೋಗಕ್ಕೆ 766 ಹಸುಗಳು ಸಾವು: ಹಾಲು ಉತ್ಪಾದನೆ ಗಣನೀಯ ಕುಸಿತ - ಈಟಿವಿ ಭಾರತ ಕನ್ನಡ

ಚರ್ಮಗಂಟು ರೋಗಕ್ಕೆ ತುತ್ತಾಗಿ ರಾಸುಗಳು ಸಾವನ್ನಪ್ಪುತ್ತಿದ್ದು ಹಾಲು ಉತ್ಪಾದನೆ ಕಡಿಮೆಯಾಗಿದೆ.

lumpy skin diseases
ಚರ್ಮಗಂಟು ರೋಗ

By

Published : Dec 23, 2022, 5:35 PM IST

Updated : Dec 24, 2022, 11:05 AM IST

ತುಮಕೂರು:ಜಿಲ್ಲೆಯಲ್ಲಿ ರಾಸುಗಳಿಗೆ ಚರ್ಮ ಗಂಟು ರೋಗ ಬಾಧಿಸುತ್ತಿದೆ. ಇದುವರೆಗೂ 766 ರಾಸುಗಳು ಮೃತಪಟ್ಟಿವೆ. ಇನ್ನೂ ಕೂಡ 8,300 ರಾಸುಗಳು ಕಾಯಿಲೆಯಿಂದ ಬಳಲುತ್ತಿವೆ. ಇದರಿಂದಾಗಿ ಒಂದು ಲಕ್ಷ ಲೀಟರ್ ಹಾಲು ಉತ್ಪಾದನೆ ಕಡಿಮೆಯಾಗಿದೆ.

ಮುಖ್ಯವಾಗಿ ಹಾಲು ಕೊಡುವ ಹಾಗೂ ಉಳುಮೆ ಮಾಡುವ ಹಸುಗಳಿಗೆ ಚರ್ಮಗಂಟು ರೋಗ ವ್ಯಾಪಕವಾಗಿ ಹರಡುತ್ತಿದೆ. ಎಲ್ಲ ತಾಲೂಕುಗಳಲ್ಲಿರುವ ರಾಸುಗಳಿಗೆ ರೋಗ ಹರಡಿದ್ದು, ಮುಖ್ಯವಾಗಿ ಶಿರಾ ಮತ್ತು ಪಾವಗಡ ತಾಲೂಕಿನಲ್ಲಿ ಅತಿ ಹೆಚ್ಚು ರಾಸುಗಳು ಇದಕ್ಕೆ ತುತ್ತಾಗಿವೆ. ತೀವ್ರ ಕಾಯಿಲೆಗೆ ಒಳಗಾಗಿರುವ ರಾಸುಗಳು ಹಾಲು ಕೊಡುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದರೆ, ಉಳುಮೆ ಮಾಡುವ ಹಸುಗಳಿಗೂ ಕೂಡ ಕಾಯಿಲೆ ಹರಡಿದ್ದು ರೈತರು ಅವುಗಳನ್ನು ಕೃಷಿ ಕಾರ್ಯಗಳಿಗೆ ಉಪಯೋಗಿಸಲು ಸಾಧ್ಯವಿಲ್ಲದಂತಾಗಿದೆ.

ಅಧ್ಯಕ್ಷ ಮಹಾಲಿಂಗಯ್ಯ ಹೇಳಿಕೆ

ಹಸುಗಳನ್ನು ಚರ್ಮ ಗಂಟು ರೋಗದಿಂದ ಪಾರು ಮಾಡಲು ಹರಸಾಹಸ ಮಾಡುತ್ತಿರುವ ಪಶುಪಾಲನಾ ಇಲಾಖೆ ಅಧಿಕಾರಿಗಳು ಇದುವರೆಗೂ 3,80,000 ಲಸಿಕೆಗಳನ್ನು ಜಿಲ್ಲೆಯಾದ್ಯಂತ ನೀಡಿದ್ದಾರೆ. ಚಿಕಿತ್ಸೆಗೆ ಪೂರಕವಾಗಿ ಔಷಧಿ ಹಾಗೂ ಇಂಜೆಕ್ಷನ್​ಗಳನ್ನು ಓಆರ್​ಎಸ್ ಸ್ಯಾಚೆಟ್ಗಳನ್ನು ನೀಡಲಾಗುತ್ತಿದೆ. ಆದರೂ ಕೂಡ ರೋಗ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿಲ್ಲ.

ಹಾಲು ಉತ್ಪಾದನೆ ಕುಂಠಿತ:ಹಸುಗಳು ಚರ್ಮಗಂಟು ರೋಗದಿಂದ ಬಳಲುತ್ತಿದ್ದು ಸಹಜವಾಗಿ ಹಾಲು ಉತ್ಪಾದನೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ತುಮಕೂರು ಹಾಲು ಒಕ್ಕೂಟಕ್ಕೆ ಒಂದು ಲಕ್ಷ ಲೀಟರ್ ಹಾಲು ಕಡಿಮೆಯಾಗಿದೆ. ಕಳೆದ ವರ್ಷ ಜಿಲ್ಲಾದ್ಯಂತ 8 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಆದರೆ ಈಗ 7 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಮಹಾಲಿಂಗಯ್ಯ ತಿಳಿಸಿದರು.

ಇದನ್ನೂ ಓದಿ:ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳಿಗೆ ಪರಿಹಾರ: ಸಚಿವ ಪ್ರಭು ಚವ್ಹಾಣ್

Last Updated : Dec 24, 2022, 11:05 AM IST

ABOUT THE AUTHOR

...view details