ತುಮಕೂರು : ಅನೇಕ ರೀತಿಯ ಪ್ರವಾಸೋದ್ಯಮವನ್ನು ನಾವು ಕಂಡಿದ್ದೇವೆ, ಅಂಥದ್ರಲ್ಲಿ ಜಿಲ್ಲೆಯಲ್ಲೊಂದು ವಿಶೇಷವಾದ ಮ್ಯಾಂಗೊ ಟೂರಿಸಂ ಆರಂಭವಾಗಿದ್ದು ಸಕತ್ ರೆಸ್ಪಾನ್ಸ್ ಸಿಗುತ್ತಿದೆ.
ಮಧುಗಿರಿ ತಾಲೂಕಿನ ದೊಡ್ಡಮಾಲೂರು ಎಂಬ ಗ್ರಾಮದಲ್ಲಿ ಈ ವಿಶೇಷ ಟೂರಿಸಂ ಚಾಲ್ತಿಯಲ್ಲಿದೆ. ಅಂಜಿನಪ್ಪ ಹಾಗೂ ಅರುಣ ದಂಪತಿಗಳ ಸುಮಾರು 40 ಎಕರೆ ವ್ಯಾಪ್ತಿಯಲ್ಲಿರುವ ಮಾವಿನ ತೋಟಕ್ಕೆ ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿಯ ಅಧಿಕಾರಿಗಳು ಹಾಗೂ ಮಾವಿನ ಪ್ರಿಯರು ಪ್ರತಿದಿನ ಭೇಟಿ ಕೊಡುತ್ತಿದ್ದಾರೆ. ಅದರಲ್ಲೂ ವೀಕೆಂಡ್ ಬಂತೆಂದರೆ, ಸಾಕು ಬೆಂಗಳೂರಿನಿಂದ ತಂಡೋಪತಂಡವಾಗಿ ಇಲ್ಲಿಗೆ ಆಗಮಿಸುವ ಮಂದಿ, ಮರದಿಂದ ಮಾವಿನ ಹಣ್ಣುಗಳನ್ನು ಕಿತ್ತು ಆನಂದ ಅನುಭವಿಸುತ್ತಾರೆ.
ಮ್ಯಾಂಗೊ ಟೂರಿಸಂಗೆ ಅಟ್ರಾಕ್ಟ್ ಆಗ್ತಿದ್ದಾರೆ ಜನ ಬೆಂಗಳೂರಿನಿಂದ ಬರುವ ನೂರಾರು ಐಟಿ ಉದ್ಯೋಗಿಗಳು ಸುಡು ಬಿಸಿಲನಲ್ಲಿ ಕೊಡೆಗಳನ್ನು ಹಿಡಿದು ಕಾಲ್ನಡಿಗೆಯಲ್ಲಿಯೇ ಬೆವರು ಸುರಿಸುತ್ತಾ ತೋಟವೆಲ್ಲಾ ಸುತ್ತಾಡುತ್ತಾರೆ. ತೋಟದಲ್ಲಿರುವ ಅನೇಕ ಜಾತಿಯ ಮರಗಳಲ್ಲಿರುವ ಮಲ್ಲಿಕಾ, ಬದಾಮಿ, ರಸಪೂರಿ, ಮಲಗೋಬ ಸೇರಿದಂತೆ ಬಗೆ ಬಗೆಯ ಮಾವಿನ ಹಣ್ಣು ಕಿತ್ತು ಮನೆಗೆ ಕೊಂಡೊಯ್ಯುತ್ತಾರೆ.
ಗುಣಮಟ್ಟದ ಮಾವಿನ ಹಣ್ಣು ಬೆಳೆಯಲು ತೋಟದ ಮಾಲೀಕ ಅಂಜಿನಪ್ಪ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಅಪ್ಪಟ ಕುರಿ ಹಾಗೂ ಕೊಟ್ಟಿಗೆ ಗೊಬ್ಬರ ಬಳಸಿದ್ದಾರೆ. ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ರೈತರಿಂದ ನೇರವಾಗಿ ಗ್ರಾಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡುವುದು. ಉತ್ತಮ, ವಾರಾಂತ್ಯದಲ್ಲಿ ತುಸು ನೆಮ್ಮದಿಯ ವಾತಾವರಣದಲ್ಲಿ ಬೆರೆಯಲು ಇಂತಹ ತೋಟಗಳಿಗೆ ಬಂದು ತಮಗಿಷ್ಟವಾದ ಹಣ್ಣು ಖರೀದಿಸುವ ವ್ಯವಸ್ಥೆ ಮಾಡಿದ್ದಾರೆ. ತೋಟದ ಮಧ್ಯ ಭಾಗದಲ್ಲೇ ಬೃಹತ್ ಕೃಷಿಹೊಂಡವನ್ನ ನಿರ್ಮಿಸಿ ಪ್ರತಿ ಮಾವಿನ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಅಳವಡಿಸಿದ್ದಾರೆ.