ತುಮಕೂರು :ನಾದಿನಿಯ ಮದುವೆ ಹಿನ್ನೆಲೆ ಮನೆ ಸ್ವಚ್ಛ ಮಾಡುತ್ತಿದ್ದ ವ್ಯಕ್ತಿ ವಿದ್ಯುತ್ ಸ್ಪರ್ಶಿಸಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾದಿನಿ ವಿವಾಹ ಸಂಭ್ರಮದಲ್ಲಿ ಸ್ವಚ್ಛತೆ ಮಾಡ್ತಿದ್ದವ ವಿದ್ಯುತ್ ಶಾಕ್‌ನಿಂದ ಜೀವ ಕಳ್ಕೊಂಡ.. - ಬೋಡಬಂಡೇನಹಳ್ಳಿ ಗ್ರಾಮ
ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ರವಿಕುಮಾರ್ ಅವರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ವ್ಯಕ್ತಿ ಸಾವು
ಬೋಡಬಂಡೇನಹಳ್ಳಿ ಗ್ರಾಮದ ರವಿಕುಮಾರ್(24) ಮೃತ ದುರ್ದೈವಿ. ತನ್ನ ನಾದಿನಿ ಮದುವೆಗೆ ಮನೆಯ ಸ್ವಚ್ಛತೆ ಮಾಡುವ ವೇಳೆ ಅನಾಹುತ ಸಂಭವಿಸಿದೆ. ಮನೆಯ ಮೇಲ್ಛಾವಣಿಯಲ್ಲಿ ಸ್ವಚ್ಛತೆಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾಗ ವಿದ್ಯುತ್ ಸ್ಪರ್ಶವಾಗಿದೆ.
ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ರವಿಕುಮಾರ್ ಅವರನ್ನು ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.