ಕರ್ನಾಟಕ

karnataka

ETV Bharat / state

ಪಕ್ಷದಲ್ಲಿನ ಬಂಡಾಯದ ಕುರಿತು ಯಾವುದೇ ಮಾಹಿತಿ ನನಗಿಲ್ಲ: ಸಚಿವ ಈಶ್ವರಪ್ಪ - ಬಿಜೆಪಿ ಬಂಡಾಯದ ಕುರಿತು ಮಾಹಿತಿ ಇಲ್ಲ

ಬಿಜೆಪಿಯಲ್ಲಿ ನಡೆದಿದೆ ಎನ್ನಲಾದ ಭಿನ್ನಮತೀಯ ಚಟುವಟಿಕೆ ಕುರಿತಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

KS Eshwarappa
ಕೆ.ಎಸ್​.ಈಶ್ವರಪ್ಪ

By

Published : May 29, 2020, 12:56 PM IST

ತುಮಕೂರು: ರಾಜ್ಯ ಬಿಜೆಪಿ ಪಕ್ಷದಲ್ಲಿ ಎದ್ದಿದೆ ಎನ್ನಲಾಗಿರುವ ಭಿನ್ನಮತ ಕುರಿತಂತೆ ಪ್ರತಿಕ್ರಿಯಿಸಿರುವ ಸಚಿವ ಕೆ.ಎಸ್​.ಈಶ್ವರಪ್ಪ, ಈ ಕುರಿತಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಟಿವಿಯಲ್ಲಿ ನೋಡಿ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.

ಸಚಿವ ಕೆ.ಎಸ್​.ಈಶ್ವರಪ್ಪ

ನಗರಕ್ಕೆ ಭೇಟಿ ನೀಡಿರುವ ಸಚಿವರು ಮಾಧ್ಯಮಗಳೊಂದಿಗೆ ಮಾತನಾಡಿ, ಪಕ್ಷದಲ್ಲಿ ನಡೆಯುತ್ತಿರುವ ಬಂಡಾಯ ವಿಚಾರದ ಕುರಿತಂತೆ ನನಗೆ ಯಾವುದೇ ಮಾಹಿತಿ ಇಲ್ಲ. ಟಿವಿಯಲ್ಲಿ ನೋಡಿದ್ದೇನೆ ಅಷ್ಟೇ. ಈ ಕುರಿತಂತೆ ಯಾವುದೇ ಮಾಹಿತಿ ಇಲ್ಲ ಎಂದರು.

ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ಯತ್ನಾಳ್​ ನೇತೃತ್ವದಲ್ಲಿ ಪಕ್ಷದ ನಾಯಕರು ಸೇರಿಕೊಂಡು ಸಿಎಂ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂದು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ ಎನ್ನುವ ವಿಷಯ ಟಿವಿಯಲ್ಲಿ ನೋಡಿ ಮಾತ್ರ ತಿಳಿದುಕೊಂಡಿದ್ದೇನೆ. ನನಗೆ ಯಾವುದೇ ವಿಷಯ ಗೊತ್ತಿಲ್ಲ ಎಂದಿದ್ದಾರೆ.

ABOUT THE AUTHOR

...view details