ತುಮಕೂರು:ತುಮಕೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಎರಡನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಿಡಿಒಗಳ ದರ್ಪ ದೌಲತ್ತಿನ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ತುರುವೇಕೆರೆ ಶಾಸಕ ಮಸಾಲ ಜಯರಾಂ ಪಿಡಿಒಗಳ ವರ್ತನೆ ಕುರಿತು ಮಾತನಾಡಿ, ಪಿಡಿಒಗಳು ಇಒಗಳನ್ನ ಕಂಟ್ರೋಲ್ ಮಾಡ್ತಿದ್ದಾರೆ.
ಆದರೆ, ಇಒಗಳು ಯಾರು ಈ ಬಗ್ಗೆ ಮಾತನಾಡುವುದಿಲ್ಲ, ಪಿಡಿಒಗಳು ಹೇಳಿದಂತೆ ಇಒಗಳು ಕುಣಿಯುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಧ್ವನಿಗೂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಕೆಲ ಪಿಡಿಒಗಳು ಆ ರೀತಿ ಮಾಡುತ್ತಾರೆ. ಪಂಚಾಯ್ತಿ ಅಧ್ಯಕ್ಷರು ರಿಸರ್ವೇಷನ್ನಲ್ಲಿ ಬಂದ್ರೆ ಅವರನ್ನ ಕೇಳೋರೆ ಗತಿ ಇರಲ್ಲ.
ಅಧ್ಯಕ್ಷರು ಬೆಲ್ ಮಾಡಿದಾಗ ಪಿಡಿಒ ಅಧ್ಯಕ್ಷರ ಚೇಂಬರ್ಗೆ ಹೋಗ್ಬೇಕೋ ಬೇಡ್ವೋ ಅನ್ನೋದರ ಬಗ್ಗೆ ಚರ್ಚೆಯಲ್ಲಿ, ಬೆಲ್ ಮಾಡಿದಾಗ ನಾನ್ಯಾಕೆ ಹೋಗ್ಬೇಕು ಅಂತ ಪಿಡಿಒ ಹೇಳ್ತಾರಂತೆ, ಈ ಬಗ್ಗೆ ಒಬ್ಬ ಎಸ್ಸಿ ಮಹಿಳಾ ಗ್ರಾ.ಪಂ ಅಧ್ಯಕ್ಷೆ ನನ್ನಲ್ಲಿ ಅಳಲು ತೋಡಿಕೊಂಡಿದ್ದಾರೆ. ಪಿಡಿಒ ಕರೆದರೆ ಬರಲ್ಲ ಅಂತೇಳಿ, ಮೊದಲಿಗೆ ನಾನೇ ಪಿಡಿಒ ಚೇಂಬರ್ಗೆ ಹೋಗ್ತಿದ್ದೆ, ಎಲ್ಲರೂ ಹೇಳಿದ್ರು ನೀವೇಕೆ ಅವರ ಚೇಂಬರ್ ಗೆ ಹೋಗ್ತಿಯಾ ನೀನೇ ಅವರನ್ನ ಕರೆಸಿಕೋ ಅಂತ ಹೇಳಿದ್ರು.