ಕರ್ನಾಟಕ

karnataka

By

Published : Nov 5, 2019, 5:22 PM IST

ETV Bharat / state

ಪ್ರಾಣಿಗಳನ್ನು ಪ್ರೀತಿಸಿ, ಸಸ್ಯಹಾರಿಗಳಾಗಿ : ಧ್ಯಾನ ಪ್ರಚಾರ ಟ್ರಸ್ಟ್​ ಅಧ್ಯಕ್ಷ ವರಹಮೂರ್ತಿ ಕರೆ

ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಎಲ್ಲರೂ ಸಸ್ಯಹಾರಿಗಳಾಗೋಣವೆಂದು, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್​ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಹಾಕರುಣ ಶಾಕಾಹಾರ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾಕರುಣ ಶಾಕಾಹಾರ ಜನಜಾಗೃತಿ ಜಾ

ತುಮಕೂರು: ಪ್ರಾಣಿಗಳನ್ನು ಪ್ರೀತಿಸುವ ಮೂಲಕ ಎಲ್ಲರೂ ಸಸ್ಯಹಾರಿಗಳಾಗೋಣವೆಂದು, ಕರ್ನಾಟಕ ಪಿರಮಿಡ್ ಧ್ಯಾನ ಪ್ರಚಾರ ಟ್ರಸ್ಟ್​ನ ಅಧ್ಯಕ್ಷ ವರಹಮೂರ್ತಿ ತಿಳಿಸಿದರು. ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಮಹಾಕರುಣ ಶಾಕಾಹಾರ ಜನಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಣಿಗಳನ್ನು ಹಿಂಸಿಸಬಾರದು ಅಹಿಂಸಾ ಪರಮೋಧರ್ಮವೆಂದು ಜ್ಞಾನಿಗಳು ಸಾರಿದ್ದು, ಎಲ್ಲರೂ ಸಸ್ಯಹಾರಿಗಳಾಗುವ ಮೂಲಕ ಪ್ರಾಣಿಗಳನ್ನು ಪ್ರೀತಿಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಮಹಾಕರುಣ ಶಾಕಾಹಾರ ಜನಜಾಗೃತಿ ಜಾ

ಸಸ್ಯಹಾರ ಒಂದು ದಿವ್ಯವಾದ ಆಹಾರವಾಗಿದ್ದು, ಅದು ಆನಂದವಾದ ಆಹಾರ ಎಂದರು. ಸಸ್ಯಾಹಾರ ಮಾನವರ ಆಹಾರವಾಗಿದ್ದು, ಹಾಗಾಗಿ ಪ್ರಾಣಿಗಳನ್ನು ಕೊಂದು ಆಹಾರ ಸೇವಿಸುವುದನ್ನು ಬಿಡಬೇಕು ಎಂದರು. ಎಲ್ಲಾ ಪ್ರಾಣಿಗಳಲ್ಲಿಯೂ ದೇವರು ಇರುತ್ತಾನೆ, ಹಾಗಾಗಿ ಪ್ರಾಣಿಗಳನ್ನು ಪ್ರೀತಿಸಿ ಎಂದು ಕರೆ ನೀಡಿದರು. ಸಿದ್ಧಗಂಗಾಶ್ರೀಗಳು ಸೇರಿದಂತೆ ಅನೇಕ ಶರಣರು ಅಹಿಂಸಾ ಪರಮೋಧರ್ಮ ಎಂದು ಸಾರಿದ್ದಾರೆ. ಆದ್ದರಿಂದ ಎಲ್ಲರೂ ಪ್ರಾಣಿಗಳನ್ನು ಪ್ರೀತಿಸೋಣ. ಈ ಮೂಲಕ ಎಲ್ಲರೂ ಶಾಕಾಹಾರಿಗಳಾಗೊಣ ಎಂದು ತಿಳಿಸಿದರು.

ABOUT THE AUTHOR

...view details