ತುಮಕೂರು: ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಹರಿಸದಿದ್ದರೆ ನ್ಯಾಯಕ್ಕಾಗಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ಹೇಮಾವತಿ ನೀರು ಸಿಗದಿದ್ದರೆ ಸುಪ್ರೀಂ ಮೊರೆ .. ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ
ಹೇಮಾವತಿ ಜಲಾಶಯದಿಂದ ಜಿಲ್ಲೆಗೆ ನಿಗದಿಯಾಗಿರುವ 24 ಟಿಎಂಸಿ ನೀರನ್ನು ಹರಿಸದಿದ್ದರೆ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ತುಮಕೂರು ಲೋಕಸಭಾ ಕ್ಷೇತ್ರದ ಸಂಸದ ಜಿ ಎಸ್ ಬಸವರಾಜು ಎಚ್ಚರಿಕೆ ನೀಡಿದ್ದಾರೆ.
ಇಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ನವಿಲೆ ಸುರಂಗ ಮಾರ್ಗ ವೀಕ್ಷಿಸಿದರು. ಹೇಮಾವತಿ ನೀರು ಬಿಡದಿದ್ದಲ್ಲಿ, ತಮಿಳುನಾಡು ಹೇಗೆ ಕಾವೇರಿ ನೀರಿನ ಪಾಲನ್ನು ಪಡೆಯುತ್ತದೆಯೋ ಅದೇ ಮಾದರಿಯಲ್ಲಿ ಹೇಮಾವತಿ ನೀರು ಪಡೆಯುತ್ತೇವೆ ಎಂದು ಗುಡುಗಿದರು. ದೇವೇಗೌಡರಿಗೆ ಈಗಾಗಲೇ ಗಂಗೆ ಶಾಪ ತಟ್ಟಿದೆ. ಜನರು ತಕ್ಕಪಾಠ ಕಲಿಸಿದ್ದಾರೆ ಎಂದು ಕುಟುಕಿದರು.
ತುಮಕೂರು ಜಿಲ್ಲೆಗೆ ಹೇಮಾವತಿ ಜಲಾಶಯದಿಂದ ಹರಿಯುವ ಬಾಗೂರು-ನವಿಲೆ ಸುರಂಗ ಮಾರ್ಗದ ಸಮೀಪ ನಿಂತು ನಾಲೆಗಳನ್ನು ಸಂಸದರು ಪರಿಶೀಲಿಸಿದರು. ಅಲ್ಲದೆ ನಾಲೆಗಳಲ್ಲಿ ಬೃಹದಾಕಾರದ ಕಲ್ಲಿನ ಬಂಡೆಗಳು ಅಡ್ಡಲಾಗಿ ಬಿದ್ದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು. ಉದ್ದೇಶ ಪೂರ್ವಕವಾಗಿ ಕಲ್ಲುಗಳನ್ನು ಹಾಕಲಾಗಿದೆ ಎಂದು ಸಂಸದರು ಅನುಮಾನ ವ್ಯಕ್ತಪಡಿಸಿದರು.