ಕರ್ನಾಟಕ

karnataka

ETV Bharat / state

ಅಪ್ರಾಪ್ತ ವಯಸ್ಸಿನಲ್ಲೇ ಮದುವೆ, ಸಂಸಾರ.. ತುಮಕೂರಲ್ಲಿ ಗಂಡನ ಕ್ರೌರ್ಯಕ್ಕೆ ಬಾಲಕಿ ಬಲಿ - abscond

ಅಪ್ರಾಪ್ತ ವಯಸ್ಸಿನಲ್ಲೇ ದಾಂಪತ್ಯಕ್ಕೆ ಕಾಲಿಟ್ಟಿದ್ದ ಬಾಲಕಿಯೋರ್ವಳು ಗಂಡನ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಅವಲಪುರ ಗ್ರಾಮದ ಶೋಭಾ(15) ಕೊಲೆಗೀಡಾದವಳು. ಆರೋಪಿ ಪತಿ ಕೊಲೆ ಮಾಡಿ ತನ್ನ ತಂದೆ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.

husband killed wife
ಕತ್ತು ಹಿಸುಕಿ ಕೊಂದ ಪತಿ

By

Published : Nov 5, 2021, 4:47 PM IST

ತುಮಕೂರು:ಕ್ಷುಲ್ಲಕ ಕಾರಣಕ್ಕೆ ತನ್ನ ಪತ್ನಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿ ಪತಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಅವಲಪುರ ಗ್ರಾಮದ ಶೋಭಾ(15) ಕೊಲೆಗೀಡಾದವಳು. ಆರೋಪಿ ಪತಿ ಕೊಲೆ ಮಾಡಿ ತನ್ನ ತಂದೆ ತಾಯಿಯೊಂದಿಗೆ ಪರಾರಿಯಾಗಿದ್ದಾನೆ.

ಎಸ್​ಎಸ್​ಎಲ್​ಸಿ ಓದುತ್ತಿದ್ದ ಅಪ್ರಾಪ್ತೆ ಶೋಭಾಳಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡ, ಹೆಂಡತಿ ನಡುವೆ ಯಾವುದೋ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆ ಪತಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details