ತುಮಕೂರು: ಪಕ್ಷಾತೀತವಾಗಿ ದೇವರ ಉತ್ಸವಾದಿಗಳನ್ನು ನಡೆಸಬೇಕು. ಜೀವನದ ಜಂಜಾಟಗಳನ್ನು ಮರೆತು ಭಗವಂತನ ಪ್ರಾರ್ಥನೆಯ ಮೂಲಕ ಆಧ್ಯಾತ್ಮಿಕ ಅನುಭವ ಪಡೆಯಬೇಕಿದೆ ಎಂದು ಶಿರಾ ಶಾಸಕ ಡಾ. ರಾಜೇಶ್ ಗೌಡ ಹೇಳಿದ್ದಾರೆ.
ಮಧುಗಿರಿ ತಾಲೂಕಿನ ನೀರಕಲ್ಲು ಗ್ರಾಮದಲ್ಲಿ ನಡೆದ ಅಮ್ಮಾಜಿ ಕಾವಲ್ಲೇಶ್ವರಿ ವಾರ್ಷಿಕ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇವತಾ ಕಾರ್ಯಗಳು ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುತ್ತವೆ. ಶ್ರದ್ಧಾ-ಭಕ್ತಿಯ ಕೇಂದ್ರಗಳಾದ ದೇಗುಲಗಳು ಎಲ್ಲರನ್ನು ಒಂದು ಮಾಡಿ ಬೆಸೆಯುತ್ತವೆ ಎಂದರು.