ಕರ್ನಾಟಕ

karnataka

ETV Bharat / state

ತುಮಕೂರಲ್ಲಿ ಖಾಸಗಿ ಬಸ್​ ಪಲ್ಟಿ..ಸ್ಥಳದಲ್ಲೇ ಐವರ ಸಾವು,40 ಮಂದಿ ಸ್ಥಿತಿ ಗಂಭೀರ

ಖಾಸಗಿ ಬಸ್ ಉರುಳಿಬಿದ್ದ ಪರಿಣಾಮ ಐವrಉ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ನಡೆದಿದೆ.

By

Published : Oct 30, 2019, 10:14 AM IST

Updated : Oct 30, 2019, 1:43 PM IST

ಸ್ಥಳದಲ್ಲೇ ನಾಲ್ವರ ಸಾವು

ತುಮಕೂರು:ಖಾಸಗಿ ಬಸ್​​ ಉರುಳಿಬಿದ್ದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜೆಟ್ಟಿ ಅಗ್ರಹಾರ ಗ್ರಾಮದ ಬಳಿ ನಡೆದಿದೆ.

ಅಪಘಾತದಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಕೊರಟಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಇಮ್ರಾನ್, ಅಕ್ರಮ್​ ಪಾಶ, ಸಾದಕ್ ,ಶಿವಕುಮಾರ್​​ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತನ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ.

ಸ್ಥಳದಲ್ಲೇ ಐವರು ಸಾವು

ಪಾವಗಡದಿಂದ ತುಮಕೂರು ಕಡೆಗೆ ಹೊರಟಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್ ನಲ್ಲಿ ಸುಮಾರು 50 ಮಂದಿ ಪ್ರಯಾಣಿಸುತ್ತಿದ್ದರು. ಬಸ್​​​ ಚಲಿಸುತ್ತಿದ್ದ ವೇಳೆ ಬೈಕ್ ಮತ್ತು ಆಟೋಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬಸ್​​ ಚಾಲಕ ಪ್ರಯತ್ನಿಸಲು ಹೋಗಿ ಬಸ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ. ಮೃತಪಟ್ಟವರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಅಪಘಾತ ಸ್ಥಳಕ್ಕೆ ಸಚಿವ ಮಾಧುಸ್ವಾಮಿ ಭೇಟಿ:
ಇನ್ನು ಬಸ್ ಅಪಘಾತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಅಪಘಾತದ ಕುರಿತು ಸಚಿವರು ಅಪಘಾತದ ಕುರಿತು ಮಾಹಿತಿ ಪಡೆದಿದ್ದಾರೆ.

ಸ್ಥಳದಲ್ಲೇ ಐವರ ಸಾವು
Last Updated : Oct 30, 2019, 1:43 PM IST

ABOUT THE AUTHOR

...view details