ತುಮಕೂರು:ಸ್ಮಾರ್ಟ್ಸಿಟಿ ಮತ್ತು ಮಹಾನಗರ ಹಾಗೂ ಎಪಿಎಂಸಿ ಅಭಿವೃದ್ಧಿ ಹೆಸರಲ್ಲಿ ನಗರದ ಜೆ.ಸಿ ರಸ್ತೆಯ ಸಿದ್ದಿವಿನಾಯಕ ಮಾರುಕಟ್ಟೆ ಜಾಗವನ್ನು ಪರಭಾರೆ ಮಾಡಲು ಹುನ್ನಾರ ನಡೆಸಲಾಗುತ್ತಿದೆ. ಅಲ್ಲದೆ ರಾತ್ರೋರಾತ್ರಿ ಆ ಸ್ಥಳದಲ್ಲಿದ್ದ ಗಣೇಶ ದೇವಾಲಯವನ್ನು ಒಡೆದು ಹಾಕಿಸಿರುವುದು ಸರಿಯಲ್ಲ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಗುಲವನ್ನು ಒಡೆದುಹಾಕುವ ಮೂಲಕ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ. ಇದ್ರಿಂದ ಸ್ಥಳೀಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ತೆರವುಗೊಳಿಸುವುದಾಗಿ ಮಹಾನಗರ ಪಾಲಿಕೆ ಆಯುಕ್ತರು ಹೇಳುತ್ತಿದ್ದಾರೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳನ್ನು ಗಾಳಿಗೆ ತೂರಿ ತೆರವುಗೊಳಿಸುವಂತೆ ಆದೇಶವಿರುವುದಿಲ್ಲ. ಧಾರ್ಮಿಕ ದತ್ತಿ ನಿಯಮಾನುಸಾರ ವಿಧಿವತ್ತಾಗಿ ಪೂಜಾ ಪುನಸ್ಕಾರಗಳನ್ನು ಮಾಡಿ ಗರ್ಭಗುಡಿಯ ವಿಗ್ರಹ ಸ್ಥಳಾಂತರಿಸಿದ ನಂತರ ಕಟ್ಟಡ ತೆರವುಗೊಳಿಸಬೇಕಿತ್ತು ಎಂದಿದ್ದಾರೆ.