ತುಮಕೂರು: ಮಾಜಿ ಉಪಮುಖ್ಯಮಂತ್ರಿ, ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ ಸ್ವಲ್ಪದರಲ್ಲೇ ಭಾರಿ ಅನಾಹುತದಿಂದ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೆಲವೇ ನಿಮಿಷಕ್ಕೆ ಕೊರಟಗೆರೆ ತಾಲೂಕಿನ ತೀತಾ ಜಲಾಶಯದ ಬಳಿ ಇರುವ ಸೇತುವೆ ಕುಸಿತಗೊಂಡಿದೆ.
ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯಿಂದ ನಿನ್ನೆ ಬೆಳಗ್ಗೆ ಸೇತುವೆ ಭಾಗಶಃ ಕುಸಿದಿತ್ತು. ಸೇತುವೆ ಕುಸಿತ ಹಿನ್ನೆಲೆ ಸಂಜೆ ಸ್ಥಳಕ್ಕೆ ಡಾ.ಜಿ ಪರಮೇಶ್ವರ್ ಕೊರಟಗೆರೆ ತಹಶೀಲ್ದಾರ್ ನಾಹಿದಾ ಸೇರಿದಂತೆ ಸ್ಥಳೀಯ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದರು.